ಟಿವಿಕೆ​ ಪಕ್ಷಕ್ಕೆ ಮತ್ತೊಂದು ಶಾಕ್​! ಪುದುಚೇರಿ ರ್ಯಾಲಿಯಲ್ಲಿ ಹೊರಗಿನವರಿಗಿಲ್ಲ ಎಂಟ್ರಿ; ಖಾಕಿ ಎಚ್ಚರಿಕೆ

ಟಿವಿಕೆ ಪಕ್ಷ
ಟಿವಿಕೆ ಪಕ್ಷ
Published on

ಪ್ರಮುಖ ಮುಖ್ಯಾಂಶಗಳು

  • ಟಿವಿಕೆ ಪಕ್ಷಕ್ಕೆ ಪುದುಚೇರಿ ಖಾಕಿ ಶಾಕ್
  • ಡಿ.9ರಂದು ನಡೆಯಲಿರುವ ಸಭೆಯಲ್ಲಿ ಸ್ಥಳೀಯರಿಗೆ ಮಾತ್ರ ಅವಕಾಶ
  • ತಮಿಳುನಾಡಿನಿಂದ ಯಾರೂ ರ್ಯಾಲಿಗೆ ಬರುವಂತಿಲ್ಲ ಎಂದು ಖಾಕಿ ಎಚ್ಚರಿಕೆ
ಚೆನ್ನೈ: ತಮಿಳಗಾ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ರಾಜಕೀಯ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರಿಗೆ ಇದೀಗ ಮತ್ತೊಮ್ಮೆ ಪೊಲೀಸರು ಶಾಕ್ ನೀಡಿದ್ದಾರೆ. ಕರೂರ್ ಕಾಲ್ತುಳಿತ ದುರಂತ ಬಳಿಕ ಪ್ರಚಾರ ರ್ಯಾಲಿ ಮುಂದುವರಿಸಲು ಕೋರಿದ್ದ ಪಕ್ಷದ ಅನುಮತಿಯನ್ನು ತಮಿಳುನಾಡು ಪೊಲೀಸರು ತಿರಸ್ಕರಿಸಿದ್ದರು. ಆದರೀಗ, ಪುದುಚೇರಿಯಲ್ಲಿ ನಡೆಯಲಿರುವ ರ್ಯಾಲಿಗೆ ಸ್ಥಳೀಯ ಖಾಕಿ ಅನುಮತಿ ನೀಡಿದ್ದೇ ಆದರೂ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಮಂಗಳವಾರ (ಡಿ.9) ಪುದುಚೇರಿಯಲ್ಲಿ ನಡೆಯಲಿರುವ ರಾಜಕೀಯ ಸಭೆಗೆ ನಿರ್ಬಂಧಗಳನ್ನು ವಿಧಿಸಿರುವ ಪೊಲೀಸರು, ಸೆ.27ರಂದು ನಡೆದ ಕರೂರ್ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಈಗ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಆದಾಗ್ಯೂ, ಉಪ್ಪಳಂನ ನ್ಯೂ ಪೋರ್ಟ್ ಎಕ್ಸ್‌ಪೋ ಮೈದಾನದಲ್ಲಿ ನಡೆಯಲಿರುವ ಈ ಸಭೆಗೆ ಪುದುಚೇರಿಯ ಜನತೆಗೆ ಮಾತ್ರ ಹಾಜರಾಗಲು ಅವಕಾಶ ನೀಡಲಾಗಿದೆ.
ಸ್ಥಳೀಯ ಜನರನ್ನು ಹೊರತುಪಡಿಸಿ ಇನ್ನಾರಿಗೂ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವುದಿಲ್ಲ ಎನ್ನಲಾಗಿದೆ. ಮುಖ್ಯವಾಗಿ, ತಮಿಳುನಾಡಿನಿಂದ ಯಾರೊಬ್ಬರೂ ಈ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಬಾರದು ಮತ್ತು ಅಕಸ್ಮಾತ್​ ಬಂದರೂ ಅವರನ್ನು ಒಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಖಡಕ್​ ಆಗಿ ಪುದುಚೇರಿ ಪೊಲೀಸರು ಎಚ್ಚರಿಸಿರುವುದಾಗಿ ವರದಿಯಾಗಿದೆ.

ಕಟ್ಟುನಿಟ್ಟಿನ ನಿಮಯಗಳು

  • ಸಭೆಯಲ್ಲಿ ಕೇವಲ 5,000 ಜನರಿಗೆ ಮಾತ್ರ ಹಾಜರಾಗಲು ಅವಕಾಶ
  • ಟಿವಿಕೆ ನೀಡಿದ ಕ್ಯೂಆರ್​ ಕೋಡ್ ಪಾಸ್ ಹೊಂದಿರುವವರಿಗೆ ಮಾತ್ರ ಎಂಟ್ರಿಗೆ ಅವಕಾಶ
  • ಜನರನ್ನು ನಿಯಂತ್ರಿಸಲು 500 ಜನರ ಸಾಮರ್ಥ್ಯವಿರುವ ಪ್ರತ್ಯೇಕ ಆವರಣಗಳನ್ನು ಸ್ಥಾಪಿಸಲು ಸಂಘಟಕರಿಗೆ ಸೂಚನೆ
  • ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಪ್ರವೇಶ ರದ್ದುವೇದಿಕೆ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ, ಆಂಬ್ಯುಲೆನ್ಸ್‌, ವೈದ್ಯಕೀಯ ತಂಡ, ಅಗ್ನಿಶಾಮಕ ದಳ, ತುರ್ತು ನಿರ್ಗಮನ ಸೇರಿ ಎಲ್ಲಾ ಸುರಕ್ಷತಾ ವ್ಯವಸ್ಥೆಗಳು ಕಡ್ಡಾಯ
  • ಮೂರು ಪ್ರದೇಶಗಳಲ್ಲಿ ಮಾತ್ರ ಪಾರ್ಕಿಂಗ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net