ಗಮನಾರ್ಹವಾಗಿ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷವು 108 ಸ್ಥಾನಗಳನ್ನು ಪಡೆದುಕೊಂಡಿದ್ದರೂ ಕೂಡಾ, ಸದನದಲ್ಲಿ ಅದರ ಪರಿಣಾಮಕಾರಿ ಬಲವು 107 ಕ್ಕೆ ಇಳಿಯುತ್ತದೆ. ಏಕೆಂದರೆ, ವಿಜಯ್ ಅವರು 2 ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದು, ಒಂದನ್ನು ಬಿಟ್ಟು ಕೊಡಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದ ಐದು ಶಾಸಕರ ಬೆಂಬಲದೊಂದಿಗೆ, ಈ ಸಂಖ್ಯೆ 112 ಕ್ಕೆ ಏರಿಕೆಯಾಗಿದ್ದು, 233 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 117 ಸಂಖ್ಯೆ ಇರುವುದರಿಂದ ವಿಜಯ್‌ಗೆ ಇನ್ನೂ ಐದು ಶಾಸಕರ ಬೆಂಬಲ ಬೇಕಾಗುತ್ತದೆ.