ಸಿಜೆಐ ಸೂರ್ಯಕಾಂತ್​ ವಿರುದ್ಧವೇ ಗುಡುಗಿದ ನಲ್ಸಾರ್ ವಿದ್ಯಾರ್ಥಿಗಳಿಗೆ ಬಾರ್ ಕೌನ್ಸಿಲ್ ಬಿಗ್​ ಶಾಕ್!

ನಲ್ಸಾರ್ ವಿದ್ಯಾರ್ಥಿಗಳಿಗೆ ಬಾರ್ ಕೌನ್ಸಿಲ್ ಬಿಗ್​ ಶಾಕ್
ನಲ್ಸಾರ್ ವಿದ್ಯಾರ್ಥಿಗಳಿಗೆ ಬಾರ್ ಕೌನ್ಸಿಲ್ ಬಿಗ್​ ಶಾಕ್
Published on

ಪ್ರಮುಖ ಮುಖ್ಯಾಂಶಗಳು

  • ಸಿಜೆಐ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಆಹ್ವಾನಕ್ಕೆ ನಲ್ಸಾರ್​ ವಿದ್ಯಾರ್ಥಿಗಳಿಂದ ವಿರೋಧ
  • ಮುಖ್ಯ ಅತಿಥಿಯಾಗಿ ಸೂರ್ಯಕಾಂತ್​ ಬೇಕಾಗಿಲ್ಲ ಎಂಬ ಒಂದಷ್ಟು ವಿದ್ಯಾರ್ಥಿಗಳಿಂದ ಕೇಳಿಬಂದಿತ್ತು ಆಕ್ಷೇಪ
  • ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಬಿಗ್ ಶಾಕ್​ ಕೊಟ್ಟ ಭಾರತೀಯ ಬಾರ್​ ಕೌನ್ಸಿಲ್​
ನವದೆಹಲಿ: ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ ನಲ್ಸಾರ್​ ಯೂನಿವರ್ಸಿಟಿಯ (NALSAR University) ವಿದ್ಯಾರ್ಥಿಗಳಿಗೆ ಭಾರತೀಯ ಇದೀಗ ಬಾರ್​ ಕೌನ್ಸಿಲ್ ಬಿಗ್ ಶಾಕ್​ ನೀಡಿದೆ.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರನ್ನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ ಕೆಲವು ವಿದ್ಯಾರ್ಥಿಗಳು, ಇದನ್ನೇ ದೊಡ್ಡ ವಿವಾದವಾಗಿ ಮಾಡಿದರು. ಈ ಬೆಳವಣಿಗೆಯಿಂದ ಸಿಟ್ಟಿಗೆದ್ದ ಬಾರ್ ಕೌನ್ಸಿಲ್‌, ಈ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಯಾವುದೇ ವಿದ್ಯಾರ್ಥಿಗೂ ಮುಂದಿನ ಆದೇಶದವರೆಗೆ ವಕೀಲರಾಗಿ ರಿಜಿಸ್ಟರ್​ ಆಗಲು ಅವಕಾಶವಿಲ್ಲ ಎಂದು ಹೇಳಿದೆ.

ವಕೀಲರಾಗಿ ನೋಂದಣಿ ಬೇಡ

2026ರಲ್ಲಿ ನಲ್ಸಾರ್‌ನಿಂದ ಕಾನೂನು ಪದವಿ ಪಡೆದ ಯಾವುದೇ ವಿದ್ಯಾರ್ಥಿಯನ್ನು ಮುಂದಿನ ಆದೇಶದವರೆಗೆ ಯಾವುದೇ ರಾಜ್ಯವು ಬಾರ್ ಕೌನ್ಸಿಲ್ ವಕೀಲರಾಗಿ ನೋಂದಣಿ ಮಾಡಿಕೊಳ್ಳಬಾರದು ಎಂದು ಬಿಸಿಐ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ, ನಲ್ಸಾರ್​ ಉಪಕುಲಪತಿಗಳಿಂದ ವರದಿಯನ್ನೂ ಕೋರಿದೆ. ಸಿಜೆಐ ಸೂರ್ಯಕಾಂತ್​ ಅವರನ್ನು ಆಹ್ವಾನಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವು ವಿದ್ಯಾರ್ಥಿಗಳ ಉದ್ಧಟತನಕ್ಕೆ ಇದೀಗ ಉಳಿದವರಿಗೂ ಸಂಕಷ್ಟ ಎದುರಾಗಿದೆ.

ವಕೀಲ ವಿಪಿ ಶರ್ಮಾ ಓಪನ್​ ಟಾಕ್​

ಘಟಿಕೋತ್ಸವ ವಿವಾದದ ಕುರಿತು ಬಾರ್​ ಕೌನ್ಸಿಲ್​, ನಲ್ಸಾರ್​ನ ಉಪಕುಲಪತಿಗಳಿಂದ ವರದಿ ಕೋರಿದೆ. ಸಮಿತಿಯ ಅನುಮೋದನೆಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಐ ಕಾರ್ಯಕಾರಿ ಸಮಿತಿ ಸದಸ್ಯ ವಕೀಲ ವಿಪಿ ಶರ್ಮಾ ಬಹಿರಂಗಪಡಿಸಿದ್ದಾರೆ. ವಿದ್ಯಾರ್ಥಿಗಳ ವಿಷಯದಲ್ಲಿ ಶಿಸ್ತಿನ ಸಮಸ್ಯೆಯನ್ನು ಪರಿಶೀಲಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಆದಾಗ್ಯೂ, ವಿಶ್ವವಿದ್ಯಾಲಯದಿಂದ ಮಾತ್ರ ವರದಿಯನ್ನು ಕೇಳಲಾಗಿದೆ ಮತ್ತು ತನಿಖೆಯಲ್ಲಿ ಯಾವುದೇ ಶಿಸ್ತಿನ ಉಲ್ಲಂಘನೆಯಾಗಿಲ್ಲ ಎಂದು ಕಂಡುಬಂದರೆ, ದಾಖಲಾತಿ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ಹೇಳಲಾಗಿದೆ. ಈ ವಿಚಾರದಲ್ಲಿ, ಬಿಸಿಐ ನಿರ್ಧಾರವನ್ನು ಪ್ರಶ್ನಿಸಲು ಬಯಸುವವರಿಗೆ ಆ ಆಯ್ಕೆಯೂ ಇದೆ ಎಂದು ತಿಳಿಸಲಾಗಿದೆ. ಒಟ್ಟಾರೆ, ಸಿಜೆಐ ಅವರ ಆಹ್ವಾನವನ್ನು ವಿರೋಧಿಸಿದ್ದು ಒಟ್ಟು 450 ವಿದ್ಯಾರ್ಥಿಗಳು ಎಂಬುದು ಗಮನಾರ್ಹ.

450 ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವೇನು?

ನಲ್ಸಾರ್ 2026ರ ಬ್ಯಾಚ್‌ನ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಕುಲಪತಿ, ರಿಜಿಸ್ಟ್ರಾರ್, ಪ್ರಾಧ್ಯಾಪಕರು ಮತ್ತು ಇತರ ಅಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿ, ಘಟಿಕೋತ್ಸವಕ್ಕೆ ಸಿಜೆಐ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ನಿರ್ಧಾರವನ್ನು ಕೈಬಿಡಿ. ಇಲ್ಲವೇ ಅವರ ಬದಲಿಗೆ ಬೇರೆ ಅವರನ್ನು ಕರೆಸುವ ಬಗ್ಗೆ ಮರುಪರಿಶೀಲಿಸಿ ಎಂದು ಒತ್ತಾಯಿಸಿದರು. ಮುಖ್ಯವಾಗಿ, ಜಂತರ್ ಮಂತರ್ ಪ್ರತಿಭಟನೆಯ ಸಮಯದಲ್ಲಿ ಪೊಲೀಸ್ ಕ್ರಮವನ್ನು ಗಮನಿಸಲು ಅವರಿಗೆ ಸಮಯವಿರಲಿಲ್ಲ ಮತ್ತು ಯುವಜನತೆಯನ್ನು ಜಿರಳೆಗಳಿಗೆ ಹೋಲಿಸಿದರು ಎಂಬ ಕಾರಣಗಳನ್ನು ಮುಂದಿಟ್ಟು ಟೀಕಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net