ಅಂದಹಾಗೆ, ರೈಹಾನ್ ವಾದ್ರಾ ಓರ್ವ ವಿಸ್ಯುವಲ್ ಆರ್ಟಿಸ್ಟ್. ಕಳೆದ ಹತ್ತು ವರ್ಷದಿಂದಲೂ ತಮ್ಮ ಕ್ಯಾಮೆರಾ ಲೆನ್ಸ್ ಮೂಲಕ ಜಗತ್ತನ್ನು ಸೆರೆಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂಬೈನ ಕೊಲಾಬಾದಲ್ಲಿರುವ ಆರ್ಟ್ ಗ್ಯಾಲರಿ ಎಪಿಆರ್‌ಇ ಆರ್ಟ್ ಹೌಸ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ರೈಹಾನ್ ಅವರು ವನ್ಯಜೀವಿಗಳನ್ನು, ಬೀದಿ ಬದಿಯಲ್ಲಿ ಕಾಣ ಸಿಗುವ ಅಪರೂಪದ ಕ್ಷಣಗಳನ್ನು ಮತ್ತು ಕಮರ್ಷಿಯಲ್ ಫೋಟೋಗ್ರಫಿಯನ್ನು ಮಾಡುತ್ತಾರೆ.