"ಅಕಾಲಿಕ ಸಾವು ಆಘಾತ ತಂದಿದೆ": ಅಗ್ನಿವೇಶ್ ಅಗರ್ವಾಲ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ! Narendra Modi

ಅಗ್ನಿವೇಶ್ ಅಗರ್ವಾಲ್ ಹೃದಯಾಘಾತದಿಂದ ನಿಧನ ಪ್ರಧಾನಿ ನರೇಂದ್ರ ಮೋದಿ ಸಂತಾಪ (ಚಿತ್ರ X)
ಅಗ್ನಿವೇಶ್ ಅಗರ್ವಾಲ್ ಹೃದಯಾಘಾತದಿಂದ ನಿಧನ ಪ್ರಧಾನಿ ನರೇಂದ್ರ ಮೋದಿ ಸಂತಾಪ (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ವೇದಾಂತ ರಿಸೋರ್ಸಸ್ ಸಂಸ್ಥೆಯ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರ ಹಿರಿಯ ಮಗ ಅಗ್ನಿವೇಶ್ ಅಗರ್ವಾಲ್ ನಿಧನ
  • ಅಮೆರಿಕದಲ್ಲಿ ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದ ಅಗ್ನಿವೇಶ್ ಅಗರ್ವಾಲ್
  • ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ಸಿಗಲಿ; ಹಠಾತ್​ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ
ಮುಂಬೈ: ವೇದಾಂತ ರಿಸೋರ್ಸಸ್ ಸಂಸ್ಥೆಯ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರ ಹಿರಿಯ ಮಗ ಅಗ್ನಿವೇಶ್ ಅಗರ್ವಾಲ್ (49) ಅಮೆರಿಕದಲ್ಲಿ ಹಠಾತ್ ಹೃದಯಾಘಾತದಿಂದ ಬುಧವಾರ(ಜ.07) ನಿಧನರಾಗಿದ್ದಾರೆ. ಈ ವಿಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಎಕ್ಸ್​ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
ಅಗ್ನಿವೇಶ್ ಅಗರ್ವಾಲ್ ಅವರ ಅಕಾಲಿಕ ನಿಧನವು ತೀವ್ರ ಆಘಾತಕಾರಿ ಮತ್ತು ದುಃಖಕರವಾಗಿದೆ. ಈ ಕಠಿಣ ಸಮಯದಲ್ಲಿ ನೀವು ಮತ್ತು ನಿಮ್ಮ ಕುಟುಂಬವು ನಿರಂತರ ಶಕ್ತಿ ಮತ್ತು ಧೈರ್ಯವನ್ನು ಪಡೆಯಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ಎಕ್ಸ್​ನಲ್ಲಿ ಬರೆದು ಪೋಸ್ಟ್​ ಮಾಡಿದ್ದಾರೆ.

ಹಿನ್ನಲೆ

ಅನಿಲ್ ಅಗರ್ವಾಲ್ ಮಗನ ಹಠಾತ್​ ನಿಧನದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, "ನನ್ನ ಜೀವನದ ಅತ್ಯಂತ ಕರಾಳ ದಿನ ಇದು. ನನ್ನ ಪ್ರೀತಿಯ ಮಗ ಅಗ್ನಿವೇಶ್ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಅಮೆರಿಕದಲ್ಲಿ ಸ್ಕೀಯಿಂಗ್ ಅಪಘಾತದ ನಂತರ ಅವನು ನ್ಯೂಯಾರ್ಕ್‌ನ ಮೌಂಟ್ ಸಿನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಚೇತರಿಕೆ ಆಗುತ್ತಿದ್ದಾನೆ ಎಂದು ಭಾವಿಸಿದ್ದೆವು. ಆದರೆ, ಹಠಾತ್​ ಹೃದಯಘಾತ ಆತನನ್ನು ನಮ್ಮಿಂದ ದೂರ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಮಧ್ಯಮ ವರ್ಗದ ಬಿಹಾರಿ ಕುಟುಂಬದಿಂದ ಜನಿಸಿದ ಅವರು ಶಕ್ತಿ, ಸಹಾನುಭೂತಿ ಮತ್ತು ಉದ್ದೇಶವನ್ನು ಹೊಂದಿದ ವ್ಯಕ್ತಿಯಾಗಿ ಬೆಳೆದಿದ್ದರು. ಅವನ ತಾಯಿಯ ಜೀವನದ ಬೆಳಕು, ರಕ್ಷಣಾತ್ಮಕ ಸಹೋದರ, ನಿಷ್ಠಾವಂತ ಸ್ನೇಹಿತನಾಗಿದ್ದ. ಹಾಗೆಯೇ ಆತ ಭೇಟಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯನ್ನು ಸೌಮ್ಯವಾಗಿ ಮಾತನಾಡಿಸುವ ವ್ಯಕ್ತಿ ಎಂದು ಅನಿಲ್ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದು ಪೋಸ್ಟ್​ ಮಾಡಿದ್ದಾರೆ.
ಅಗರ್ವಾಲ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಅವರ ದಿವಂಗತ ಮಗ ಅಗ್ನಿವೇಶ್ ಮತ್ತು ಮಗಳು ಪ್ರಿಯಾ, ಅವರು ವೇದಾಂತ ಲಿಮಿಟೆಡ್‌ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ.

ಅಗ್ನಿವೇಶ್ ಅಗರ್ವಾಲ್ ಅವರ ವೃತ್ತಿಜೀವನ

ಅಗ್ನಿವೇಶ್ ಅವರು ವೇದಾಂತ ಸಮೂಹದ ವಿವಿಧ ಉದ್ಯಮಗಳಲ್ಲಿ ಸಕ್ರಿಯರಾಗಿದ್ದರು. ವಿಶೇಷವಾಗಿ ದುಬೈ ಮೂಲದ ಫ್ಯೂಚರ್ ಮೆಟಲ್ಸ್ ಕಂಪನಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಪಂಜಾಬ್ ಸ್ಟೇಟ್ ಹೈದರ್ ಪವರ್ ಕಾರ್ಪೊರೇಶನ್ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net