ಇಂದು ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಅಧ್ಯಕ್ಷ ನಿತಿನ್ ನವೀನ್ ಮೊದಲ ಸಭೆ; ಮೋದಿ@25 ಅಭಿಯಾನ, ಮುಂದಿನ ಚುನಾವಣೆಗಳ ಬಗ್ಗೆ ಚರ್ಚೆ | BJP

ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
Published on
ನವದೆಹಲಿ: ಭಾರತೀಯ ಜನತಾ ಪಕ್ಷವು(BJP) ನವದೆಹಲಿಯಲ್ಲಿ ಅಧ್ಯಕ್ಷ ನಿತಿನ್ ನವೀನ್ ನೇತೃತ್ವದಲ್ಲಿ ಇತ್ತೀಚೆಗೆ ನೇಮಕಗೊಂಡ ನೂತನ ಪದಾಧಿಕಾರಿಗಳ ಜೊತೆ ಇಂದು(ಆ. 22) ಮೊದಲ ಸಭೆ ನಡೆಸಲಿದ್ದು, ಮೋದಿ@25 ಅಭಿಯಾನ ಮತ್ತು 2027ರ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಈ ಸಭೆ ನಡೆಯಲಿದೆ. ಸಭೆಯೂ ಹೊಸ ತಂಡಕ್ಕೆ ಪರಿಚಯಾತ್ಮಕ ಅಧಿವೇಶನವಾಗಿ ಕಾರ್ಯನಿರ್ವಹಿಸಲಿದ್ದು, ಸಾಂಸ್ಥಿಕ ಆದ್ಯತೆಗಳು, ಪಕ್ಷದ ಕಾರ್ಯಕರ್ತರೊಂದಿಗೆ ಸಮನ್ವಯ ಮತ್ತು ಬಿಜೆಪಿಯ ತಳಮಟ್ಟದ ಜಾಲವನ್ನು ಬಲಪಡಿಸುವ ಬಗ್ಗೆ ಗಮನಹರಿಸುವ ನಿರೀಕ್ಷೆಯಿದೆ.
ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ಅದರ ದೀರ್ಘಾವಧಿಯ ಸಾಂಸ್ಥಿಕ ಕಾರ್ಯತಂತ್ರದ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರವ್ಯಾಪಿ 'ಮೋದಿ@25' ಅಭಿಯಾನದ ಕುರಿತು ಚರ್ಚೆ ನಡೆಸಲಿದೆ.
ಸಭೆಯಲ್ಲಿ ನಿತಿನ್ ನವೀನ್ ಜೊತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಮತ್ತು ಕಾರ್ಯಕ್ರಮ ಉಸ್ತುವಾರಿ ವಿನೋದ್ ತಾವ್ಡೆ ಭಾಗವಹಿಸುವ ನಿರೀಕ್ಷೆಯಿದೆ, ರಾಜ್ಯ ಅಧ್ಯಕ್ಷರು, ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳು ಹಾಜರಾಗಲಿದ್ದಾರೆ ಎನ್ನಲಾಗಿದೆ.
ಆಗಸ್ಟ್ 17ರಂದು ಬಿಜೆಪಿ, ಪಕ್ಷದ ಅಧ್ಯಕ್ಷ ನಬಿನ್ ನೇತೃತ್ವದಲ್ಲಿ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಘೋಷಿಸಿತು. ಹೊಸ ತಂಡದಲ್ಲಿ 13 ರಾಷ್ಟ್ರೀಯ ಉಪಾಧ್ಯಕ್ಷರು, ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, 16 ರಾಷ್ಟ್ರೀಯ ಕಾರ್ಯದರ್ಶಿಗಳು ಹಾಗೂ ಇತರ ಸಾಂಸ್ಥಿಕ ನೇಮಕಾತಿಗಳು ಸೇರಿವೆ.
ವಸುಂಧರಾ ರಾಜೇ ಸಿಂಧಿಯಾ, ರಾಮ್ ಮಾಧವ್, ಬೈಜಯಂತ್ ಪಾಂಡಾ ಮತ್ತು ತಿರತ್ ಸಿಂಗ್ ರಾವತ್ ಸೇರಿದಂತೆ ಹಿರಿಯ ನಾಯಕರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಸ್ಮೃತಿ ಇರಾನಿ, ವಿನೋದ್ ತಾವ್ಡೆ, ಸುನಿಲ್ ಬನ್ಸಾಲ್ ಮತ್ತು ಬಿಪ್ಲಬ್ ಕುಮಾರ್ ದೇಬ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ. ಬಿ.ಎಲ್. ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಆಗಿ ಮುಂದುವರೆದಿದ್ದಾರೆ, ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಖಜಾಂಚಿಯಾಗಿ ನೇಮಿಸಲಾಗಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net