ರಾಷ್ಟ್ರಪತಿ ಮತ್ತು ಸಂತರ ಆಧ್ಯಾತ್ಮಿಕ ಸಂವಾದ: ಪ್ರೇಮಾನಂದ ಮಹಾರಾಜರ ಸರಳತೆಗೆ ಮನಸೋತ ದ್ರೌಪದಿ ಮುರ್ಮು Droupadi Murmu
ರಾಷ್ಟ್ರಪತಿ Droupadi Murmu (ಚಿತ್ರ X)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಉತ್ತರ ಪ್ರದೇಶದ ಪವಿತ್ರ ನಗರಿಗಳಾದ ಮಥುರಾ ಮತ್ತು ವೃಂದಾನಕ್ಕೆ ಭೇಟಿ
ರಾಷ್ಟ್ರಪತಿಗಳು ದೇವಾಲಯಗಳಿಗೆ ಭೇಟಿ ನೀಡುವುದರ ಜೊತೆಗೆ ಆಧ್ಯಾತ್ಮಿಕ ಗುರುಗಳೊಂದಿಗೆ ಸಂವಾದ ನಡೆಸಿದರು
ಶ್ರೀ ಹಿತ್ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿ ಸಂತ ಪ್ರೇಮಾನಂದ ಜೀ ಮಹಾರಾಜರನ್ನು ಭೇಟಿಯಾದರು
ಮಥುರಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇಂದು ಉತ್ತರ ಪ್ರದೇಶದ ಪವಿತ್ರ ನಗರಿಗಳಾದ ಮಥುರಾ ಮತ್ತು ವೃಂದಾನಕ್ಕೆ ಭೇಟಿ ನೀಡಿ, ವಿವಿಧ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅವರ ಈ ಭೇಟಿಯು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವಂತಿತ್ತು.
ತಮ್ಮ ವಾಸ್ತವ್ಯದ ಸಮಯದಲ್ಲಿ, ರಾಷ್ಟ್ರಪತಿಗಳು ದೇವಾಲಯಗಳಿಗೆ ಭೇಟಿ ನೀಡುವುದರ ಜೊತೆಗೆ ಆಧ್ಯಾತ್ಮಿಕ ಗುರುಗಳೊಂದಿಗೆ ಸಂವಾದ ನಡೆಸಿ, ಕೆಲಕಾಲ ಧ್ಯಾನ ಮತ್ತು ಪ್ರಾರ್ಥನೆಯಲ್ಲಿ ತೊಡಗಿದ್ದರು. ಇದಾದ ಬಳಿಕ ಮಥುರೆಯ ಕೃಷ್ಣ ಜನ್ಮ ಭೂಮಿಯಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿದರು.
ವೃಂದಾವನ ಆಶ್ರಮಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು!
ರಾಷ್ಟ್ರಪತಿಗಳು ವೃಂದಾವನದಲ್ಲಿರುವ ಶ್ರೀ ಹಿತ್ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿ ಸಂತ ಪ್ರೇಮಾನಂದ ಜೀ ಮಹಾರಾಜರನ್ನು ಭೇಟಿಯಾದರು. ಈ ವೇಳೆ ಅವರ ಶಿಷ್ಯರು ಮತ್ತು ಅನುಯಾಯಿಗಳು ಅವರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದರು.
ಆಧ್ಯಾತ್ಮಿಕತೆ, ಸೇವೆ ಮತ್ತು ಸಾರ್ವಜನಿಕ ಕಲ್ಯಾಣದ ಕುರಿತು ಚರ್ಚೆ
ಸಭೆಯಲ್ಲಿ ಸಂತ ಪ್ರೇಮಾನಂದ ಮಹಾರಾಜ್ ಅವರು ಆಧ್ಯಾತ್ಮಿಕತೆ, ಸೇವೆ ಮತ್ತು ಸಾರ್ವಜನಿಕ ಕಲ್ಯಾಣದ ಕುರಿತು ಮುರ್ಮು ಅವರೊಂದಿಗೆ ಚರ್ಚೆ ನಡೆಸಿದರು. ಆದಾಗ್ಯೂ, ಸಂತರ ಸರಳ ಜೀವನಶೈಲಿ ಮತ್ತು ಆಧ್ಯಾತ್ಮಿಕ ಭೋದನೆಗಳಿಗೆ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಅಯೋಧ್ಯೆ ರಾಮ ಮಂದಿರಕ್ಕೆ ಇದಕ್ಕೂ ಮುನ್ನ ಭೇಟಿ
ರಾಷ್ಟ್ರಪತಿಗಳು ಮಥುರಾಗೆ ಭೇಟಿ ನೀಡುವ ಮೊದಲು, ರಾಮ ಜನ್ಮ ಭೂಮಿ ಮಥುರಾಗೆ ಭೇಟಿ ನೀಡಿದರು. ಸುಮಾರು 150 ಕಿಲೋಗ್ರಾಂಗಳಷ್ಟು ಚಿನ್ನದಿಂದ ಅಲಂಕರಿಸಲ್ಪಟ್ಟ ರಾಮ ಯಂತ್ರದ ಸ್ಥಾಪನೆಯಲ್ಲೂ ಅವರು ಭಾಗವಹಿಸಿದರು (ಏಜೆನ್ಸೀಸ್).