ಸಚಿವ ಸಂಪುಟದಲ್ಲಿ ಖಾಸಗಿ ವ್ಯಕ್ತಿಗಳ ಉಪಸ್ಥಿತಿ: ವಿಪಕ್ಷಗಳಿಂದ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು | TVK government

ಸಿಎಂ ಸಿ.ಜೋಸೆಫ್ ವಿಜಯ್
ಸಿಎಂ ಸಿ.ಜೋಸೆಫ್ ವಿಜಯ್
Published on
ಚೆನ್ನೈ: ಇತ್ತೀಚೆಗೆ ನಡೆದ ತಮಿಳುನಾಡು ಸಿಎಂ ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ(TVK government) ಸಚಿವ ಸಂಪುಟ ಸಭೆಯಲ್ಲಿ ಖಾಸಗಿ ವ್ಯಕ್ತಿಗಳು ಉಪಸ್ಥಿತರಿದ್ದರು ಎಂದು ಆರೋಪಿಸಿರುವ ಡಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ಪಕ್ಷಗಳು, ಈ ಬಗ್ಗೆ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯಪಾಲ ಆರ್‌.ವಿ.ಅರ್ಲೇಕರ್ ಅವರಿಗೆ ದೂರು ನೀಡಿವೆ ಎಂದು ಭಾನುವಾರ(ಜು. 05) ವರದಿಯಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಜಾನ್ ಆರೋಕಿಯಸಾಮಿ ಮತ್ತು ವಿಷ್ಣು ರೆಡ್ಡಿ ಎಂಬುವರು ಭಾಗವಹಿಸಿದ್ದರು ಎನ್ನಲಾಗಿದೆ. ಅವರು ಯಾವುದೇ ಅಧಿಕೃತ ಸರ್ಕಾರಿ ಹುದ್ದೆಯನ್ನು ಹೊಂದಿಲ್ಲ ಎನ್ನಲಾಗಿದೆ. ಮತ್ತು ಸರ್ಕಾರದ ಅಧಿಕೃತ ಕೆಲಸದಲ್ಲಿ ಹಸ್ತಕ್ಷೇಪ ಮತ್ತು ಕಾನೂನು ಉಲ್ಲಂಘಿಸಿ ಸಚಿವಾಲಯದಲ್ಲಿ ಕಾರ್ಯನಿರ್ವಹಣೆ ಮಾಡ್ತಿದ್ದರು ಎಂದು ವಿಪಕ್ಷಗಳು ಆರೋಪಿಸಿವೆ.
ಸಿಎಂ ಸಿ. ಜೋಸೆಫ್ ವಿಜಯ್ ಮತ್ತು ಉನ್ನತ ಶಿಕ್ಷಣ ಸಚಿವ ಪಿ.ವಿಶ್ವನಾಥನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಬಿಜೆಪಿ ತಮಿಳುನಾಡು ಮುಖ್ಯಸ್ಥ ನೈನಾರ್ ನಾಗೇಂದ್ರನ್ ರಾಜ್ಯಪಾಲರಿಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದು ಅರ್ಜಿಯಲ್ಲಿ ಸಂಪುಟ ಸಭೆಯಲ್ಲಿ ಇಬ್ಬರು ವ್ಯಕ್ತಿಗಳು ಭಾಗವಹಿಸಿದ್ದು, ಸಂಪುಟದ ಕಾರ್ಯವೈಖರಿಯನ್ನು ನಿಯಂತ್ರಿಸುವ ಗೌಪ್ಯತೆಯ ಪ್ರಮಾಣವಚನ ಉಲ್ಲಂಘನೆಯಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.
ಆರೋಕಿಸಾಮಿ ಮತ್ತು ವಿಷ್ಣುರೆಡ್ಡಿ ಸಭೆಯಲ್ಲಿ ಹಾಜರಿದ್ದು ಸರ್ಕಾರದ ಅಧಿಕೃತ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ. ಹಾಗೆಯೇ ಎಐಎಡಿಎಂಕೆ ಸಹ ರಾಜ್ಯಪಾಲರು ಸಂವಿಧಾನದ 167 ನೇ ವಿಧಿಯ ಅಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸಬೇಕು ಮತ್ತು ಆರೋಪಗಳ ಕುರಿತು ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳಿಂದ ವರದಿಗಳನ್ನು ಪಡೆಯಬೇಕು ಎಂದು ಒತ್ತಾಯಿಸಿದೆ.
ಇನ್ನೂ ಆರೋಪಗಳನ್ನು ತಿರಸ್ಕರಿಸಿರುವ ಆಡಳಿತರೂಢ ಟಿವಿಕೆ, ಆರೋಕಿಯಸಾಮಿ ಮತ್ತು ವಿಷ್ಣು ರೆಡ್ಡಿ ಇಬ್ಬರನ್ನೂ ಸಿಎಂ ಅವರ ವಿಶೇಷ ಸಲಹೆಗಾರರಾಗಿ ನೇಮಿಸಲಾಗಿದೆ. ಅವರು ಯಾವುದೇ ಖಾಸಗಿ ವ್ಯಕ್ತಿಗಳಲ್ಲ ಎಂದ ಸ್ಪಷ್ಟಪಡಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net