ತಮ್ಮ ರಾಜ್ಯದಲ್ಲೇ ಬುಡಮೇಲಾದ ಚುನಾವಣಾ ಚಾಣಕ್ಯನ ತಂತ್ರ: ಶೂನ್ಯ ಸಾಧನೆ! Prashant Kishor

ಪ್ರಶಾಂತ್​ ಕಿಶೋರ್​
ಪ್ರಶಾಂತ್​ ಕಿಶೋರ್​
Published on

ಪ್ರಮುಖ ಮುಖ್ಯಾಂಶಗಳು

  • ಪ್ರಶಾಂತ್ ಕಿಶೋರ್... ಈ ಹೆಸರು ರಾಜಕೀಯ ವಲಯದಲ್ಲಿ ತುಂಬಾ ಜನಪ್ರಿಯ
  • ದೇಶಾದ್ಯಂತ ವಿವಿಧ ಪಕ್ಷಗಳಿಗೆ ತಂತ್ರಜ್ಞರಾಗಿ ಕೆಲಸ ಮಾಡಿರುವ ಪ್ರಶಾಂತ್​
  • ಆದರೆ, ತಮ್ಮದೇ ರಾಜ್ಯದಲ್ಲಿ ಫಲಿಸದ ಪ್ರಶಾಂತ್​ ಅವರ ತಂತ್ರ
  • ಬಿಹಾರದಲ್ಲಿ ಶೂನ್ಯ ಸಾಧನೆಯತ್ತ ಸಾಗಿದ ಪ್ರಶಾಂತ್​ ಕಿಶೋರ್​ ಪಕ್ಷ
ಪಟನಾ : ಪ್ರಶಾಂತ್ ಕಿಶೋರ್... ( Prashant Kishor ) ಈ ಹೆಸರು ರಾಜಕೀಯ ವಲಯದಲ್ಲಿ ತುಂಬಾ ಜನಪ್ರಿಯ. ಆತ ಓರ್ವ ಚುನಾವಣಾ ತಂತ್ರಜ್ಞ. ದೇಶಾದ್ಯಂತ ವಿವಿಧ ಪಕ್ಷಗಳಿಗೆ ತಂತ್ರಜ್ಞರಾಗಿ ಕೆಲಸ ಮಾಡಿರುವ ಪ್ರಶಾಂತ್​, ತಮ್ಮ ತಂತ್ರಗಳಿಂದ ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಗಳನ್ನು ಅಧಿಕಾರಕ್ಕೆ ತಂದಿದ್ದಾರೆ. ಆದರೆ, ತಮ್ಮದೇ ರಾಜ್ಯದಲ್ಲಿ ಪ್ರಶಾಂತ್​ ಅವರ ತಂತ್ರ ಫಲಿಸಲಿಲ್ಲ.
ಬಿಹಾರ ಚುನಾವಣೆಗೆ ಮುಂಚೆಯೇ, ನಿತೀಶ್ ಕುಮಾರ್ ಮೈತ್ರಿಕೂಟ ಈ ಬಾರಿ ಹೀನಾಯವಾಗಿ ಸೋಲುತ್ತದೆ ಎಂದು ಪ್ರಶಾಂತ್​ ಕಿಶೋರ್​ ಹೇಳುತ್ತಿದ್ದರು. ಅಲ್ಲದೆ, ಈ ಬಾರಿ ರಾಜ್ಯದಲ್ಲಿ ಬದಲಾವಣೆ ಖಚಿತ, ಬಿಹಾರಿಗಳು ಬದಲಾವಣೆಯನ್ನು ಬಯಸುತ್ತಿದ್ದಾರೆ ಮತ್ತು ಜನ್​ ಸೂರಜ್ ಪಕ್ಷದತ್ತ ವಾಲುತ್ತಿದ್ದಾರೆ ಎಂದು ಪುಂಕಾನುಪುಂಕವಾಗಿ ಮಾತನಾಡುತ್ತಿದ್ದರು. ಆದರೆ, ಜನರ ತೀರ್ಪು ಬೇರೆಯಾಗಿದ್ದು, ರಾಜಕೀಯ ತಂತ್ರಜ್ಞನ ತಂತ್ರವು ಸಂಪೂರ್ಣವಾಗಿ ತಲೆಕೆಳಗಾಗಿದೆ.
ಶುಕ್ರವಾರ ಬೆಳಗ್ಗೆ ಬಿಹಾರ ಚುನಾವಣೆಯ ಎಣಿಕೆ ಪ್ರಾರಂಭವಾದಾಗ, ಅಂಚೆ ಎಣಿಕೆಯಲ್ಲಿ ಪ್ರಶಾಂತ್​ ಅವರ ಪಕ್ಷ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು ಆದರೆ, ಈಗ 'ಶೂನ್ಯ' ಸ್ಥಾನದಲ್ಲಿ ಮುಂದುವರೆದಿದೆ. ಅದು ರಾಜ್ಯದಲ್ಲಿ ಎಲ್ಲಿಯೂ ಯಾವುದೇ ಪರಿಣಾಮ ಬೀರಿಲ್ಲ. ಸಮೀಕ್ಷೆಗಳು ಹೇಳಿದಂತೆ, ಬಿಹಾರಿಗಳು NDA ಮೈತ್ರಿಕೂಟದತ್ತ ಒಲವು ತೋರಿದ್ದಾರೆ.
ಆಡಳಿತಾರೂಢ ಮೈತ್ರಿಕೂಟವು ಭಾರಿ ಗೆಲುವಿನತ್ತ ಸಾಗುತ್ತಿದೆ. ಪ್ರಸ್ತುತ, NDA ಮೈತ್ರಿಕೂಟ 201 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂಧನ್ ಮೈತ್ರಿಕೂಟ 57 ಸ್ಥಾನಗಳಲ್ಲಿ ಮುಂದುವರೆದಿದೆ. ಇತರರು 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net