Prashant Kishor | ಇದರ ಪ್ರಾಯಶ್ಚಿತಕ್ಕಾಗಿ ಮೌನ ವೃತ; ಪ್ರಶಾಂತ್​ ಕಿಶೋರ್​ ಮಾಡಿದ್ದ ಪಾಪವಾದರು ಏನು..?

Prashant Kishor | ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಬಿಹಾರದ ಭಿತಿಹರ್ವ ಗಾಂಧಿ ಆಶ್ರಮದಲ್ಲಿ ಮೌನ ವ್ರತ ನಡೆಸಿದ್ದಾರೆ. ( ಚಿತ್ರಕೃಪೆ- ಜನ್​ ಸುರಾಜ್​ )
Prashant Kishor | ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಬಿಹಾರದ ಭಿತಿಹರ್ವ ಗಾಂಧಿ ಆಶ್ರಮದಲ್ಲಿ ಮೌನ ವ್ರತ ನಡೆಸಿದ್ದಾರೆ. ( ಚಿತ್ರಕೃಪೆ- ಜನ್​ ಸುರಾಜ್​ )
Published on
ಪಟನಾ: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ಬಳಿಕ ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಗುರುವಾರ ( ನ.20) ಬಿಹಾರದ ಭಿತಿಹರ್ವ ಗಾಂಧಿ ಆಶ್ರಮದಲ್ಲಿ ಮೌನ ವ್ರತ ನಡೆಸಿದ್ದಾರೆ.
ನಿತೀಶ್ ಕುಮಾರ್ 10 ನೇ ಬಾರಿಗೆ ದಾಖಲೆಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲ ಹೊತ್ತಿನ ಬಳಿಕ ಈ ಬೆಳವಣಿಗೆ ನಡೆದಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಿಶೋರ್, ನವೆಂಬರ್ 20 ರಂದು ಗಾಂಧಿ ಭಿತಿಹರ್ವ ಆಶ್ರಮದಲ್ಲಿ ಒಂದು ದಿನದ ಮೌನ ವೃತ ಆಚರಿಸುವುದಾಗಿ ಘೋಷಿಸಿದ್ದರು. ಕಳೆದ ಮೂರು ವರ್ಷಗಳಲ್ಲಿ ನೀವು ನೋಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಶ್ರಮವನ್ನು ಇನ್ನು ಮುಂದೆ ಹಾಕಲಿದ್ದೇನೆ, ನನ್ನ ಎಲ್ಲಾ ಶಕ್ತಿಯನ್ನು ರಾಜ್ಯಕ್ಕಾಗಿ ವ್ಯಯಿಸುತ್ತೇನೆ. ಈ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಿಹಾರವನ್ನು ಉತ್ತಮ ಸ್ಥಿತಿಗೆ ತರುವವರೆಗೆ ನಾನು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಹಾರದ ಜನರು ಯಾವ ಆಧಾರದ ಮೇಲೆ ಮತ ಚಲಾಯಿಸಬೇಕು ಮತ್ತು ಹೊಸ ವ್ಯವಸ್ಥೆಯನ್ನು ಏಕೆ ನಿರ್ಮಿಸಬೇಕು ಎನ್ನುವ ವಿಷಯವನ್ನು ವಿವರಿಸಲು ನಾನು ವಿಫಲನಾಗಿದ್ದೇನೆ. ಆದ್ದರಿಂದ, ಅದರ ಪ್ರಾಯಶ್ಚಿತ್ತವಾಗಿ, ನವೆಂಬರ್ 20 ರಂದು ಗಾಂಧಿ ಭಿತಿಹರ್ವ ಆಶ್ರಮದಲ್ಲಿ ನಾನು ಒಂದು ದಿನದ ಮೌನ ಉಪವಾಸವನ್ನು ಆಚರಿಸುತ್ತೇನೆ. ನಾವು ಕೆಲ ತಪ್ಪುಗಳನ್ನು ಮಾಡಿರಬಹುದು, ಆದರೆ ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದರು.
ಅನೇಕ ಮತದಾನೋತ್ತರ ಸಮೀಕ್ಷೆಗಳು ನುಡಿದಂತೆ ಆಡಳಿತಾರೂಢ ಎನ್‌ಡಿಎ ಈ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಬಿಜೆಪಿ ತಾನು ಸ್ಪರ್ಧಿಸಿದ 101 ಸ್ಥಾನಗಳಲ್ಲಿ 89 ರಲ್ಲಿ ಗೆಲುವು ಸಾಧಿಸಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಇತ್ತ ನಿತೀಶ್​ ಕುಮಾರ್​ರ ಜೆಡಿಯು 85 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ. ಈ ವರ್ಷ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದ ಜನ್ ಸುರಾಜ್ ಒಂದೇ ಒಂದು ಸ್ಥಾನವನ್ನು ಸಹ ಗೆಲ್ಲಲು ಸಾಧ್ಯವಾಗಲಿಲ್ಲ.

ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ

ನೂತನ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಇಂದು (ಗುರುವಾರ ನ. 20) ನಡೆಯಿತು. ನಿತೀಶ್​ ಇದೇ ಮೈದಾನದಲ್ಲಿ 2005, 2010 ಮತ್ತು 2015 ರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net