'ಜನರ ಸಮಸ್ಯೆ ಆಲಿಸಿಲ್ಲ, ಹೋರಾಟಕ್ಕಿಳಿಯದ ನೀವು ನೇರ ಸಿಎಂ ಆಗ್ಬೇಕಾ?'; ನಟ ವಿಜಯ್ ರಾಜಕೀಯದ ಬಗ್ಗೆ Prakash Raj ಹೇಳಿದ್ದಿಷ್ಟು

Prakash Raj
Prakash Raj
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್ ಅವರ ರಾಜಕೀಯ ಪ್ರವೇಶವನ್ನು 'ಸಿನಿಮಾ ಮಾದರಿ' ಎಂದು ವ್ಯಂಗ್ಯವಾಡಿದ ಪ್ರಕಾಶ್​ ರಾಜ್​
  • ರಾಜಕೀಯ ಎಂದರೆ ನಟನೆ ಅಲ್ಲ ಜವಾಬ್ದಾರಿ ಹೊರಲು ತಳದಿಂದ ಕೆಲಸ ಮಾಡ್ಬೇಕು
  • ಅಭಿಮಾನ ಬೇರೆ, ದೇಶದ ಆಡಳಿತ ಬೇರೆ ಎಂದು ಸಂದೇಶ ರವಾನಿಸಿದ ಪ್ರಕಾಶ್​
ನಟ ವಿಜಯ್​ ಅವರು ಸಿನಿಮಾ ತೊರೆದು, ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಹಲವರು ಗಣ್ಯರು ಅವರಿಗೆ ಸಾಕಷ್ಟು ಸಲಹೆ ನೀಡಿದ್ದಾರೆ. ಶ್ರೀಲಂಕಾದ ಸಂಸದ ನಮಲ್ ರಾಜಪಕ್ಸೆ ಅವರು, ಸಿನಿಮಾ ಸ್ಕ್ರಿಪ್ಟ್​ನಂತೆ ರಾಜಕೀಯ ಇರೋದಿಲ್ಲ. ಇದಕ್ಕಾಗಿ ಸಾಕಷ್ಟು ಶ್ರಮಿಸಬೇಕು ಎಂದು ಹೇಳಿದ್ದರು. ಆ ಬೆನ್ನಲ್ಲೇ ಬಹುಭಾಷಾ ನಟ ಪ್ರಕಾಶ್​ ರಾಜ್​ ಮಾತನಾಡಿರುವುದು ಸದ್ಯ ವೈರಲ್​ ಆಗಿದೆ.

ಪ್ರಕಾಶ್​ ರಾಜ್​ ಹೇಳಿದ್ದೇನು?

23 ಏಪ್ರಿಲ್ 2026ರಂದು ನಡೆಯುವ ವಿಧಾನಸಭೆ ಚುನಾವಣೆಗೆ ತಮಿಳುನಾಡು ಸಿದ್ಧವಾಗಿದೆ. ಇತ್ತ ಮೊದಲಬಾರಿಗೆ ರಾಜಕೀಯ ಅಖಾಡಕ್ಕೆ ಧುಮುಕಿರುವ ವಿಜಯ್​ ಅವರಿಗೆ ಸಾಕಷ್ಟು ಸಂಕಷ್ಟ ಎದುರಾಗಿದೆ. ಈ ಹೊತ್ತಲ್ಲೇ ಪ್ರಕಾಶ್​ ರಾಜ್​ ಅವರು ಪಳನಿಯಲ್ಲಿ ಸಿಪಿಐ(ಎಂ) ಅಭ್ಯರ್ಥಿ ಎನ್. ಪಾಂಡಿ ಪರ ಪ್ರಚಾರ ನಡೆಸುವ ವೇಳೆ ಮಾತನಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಟ ವಿಜಯ್ ಅವರ ರಾಜಕೀಯ ಪ್ರವೇಶಿಸಿದ ಮಾದರಿಯನ್ನು ಸಿನಿಮಾ ರೀತಿ ಎಂದಿರುವುದು ಪರವಿರೋಧ ವಾದಕ್ಕೆ ಮುನ್ನುಡಿಯನ್ನಿಟ್ಟಿದೆ.

ಸಿನಿಮಾ ನಟನೆ ಬೇರೆ, ರಾಜಕೀಯಾನೆ ಬೇರೆ

"ಸಿನಿಮಾದಲ್ಲಿ ನಾವು ಏನು ಬೇಕಾದರು ಆಗಬಹುದು. ಒಂದು ಡಾಕ್ಟರ್​​, ಎಂಜಿನಿಯರ್​, ಮುಖ್ಯಮಂತ್ರಿ, ರೈತ ಎಲ್ಲ. ಆದರೆ, ರಾಜಕೀಯದ ಗಂಧ-ಗಾಳಿ ತಿಳಿಯದೆ ಜನರ ಜೊತೆ ಬೆರೆಯದೆ, ಕಷ್ಟ ಎಂದಾಗ ಅವರ ಜೊತೆ ಸಂವಹನ ನಡೆಸದೆ ಹೇಗೆ ಸಿಎಂ ಆಗೋಕೆ ಕಾರಣ. ನೀವು ತಮಿಳುನಾಡಿನ ಜನರ ಸಮಸ್ಯೆಗಳ ಬಗ್ಗೆ ಎಂದಾದರೂ ದನಿ ಎತ್ತಿದ್ದೀರಾ?, ಭಾಷೆ ವಿರುದ್ಧ ದನಿ ಎತ್ತಿದ್ದೀರಾ" ಎಂದು ಸಾಕಷ್ಟು ಪ್ರಶ್ನೆಗಳನ್ನು ಅವರ ಮುಂದಿಟ್ಟರು.
ನಿಮ್ಮ ಅಭಿಮಾನಿಗಳಿಗೆ ನಿಮ್ಮ ಅಭಿನಯದ ಬಗ್ಗೆ ಪ್ರೀತಿ ಇದೆ. ಅವರ ಅಭಿಮಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದೀರಲ್ಲ. ಜನರು ನಿಮ್ಮ ಸಿನಿಮಾ ರಿಲೀಸ್​ ಆಗುತ್ತಲೇ, ಬಿಸಿಲಿನಲ್ಲಿ ನಿಂತು ಟಿಕೆಟ್ ಖರೀದಿಸಿ, ಕಟೌಟ್ ಹಾಕಿ ನಿಮಗೆ ಪ್ರೀತಿ ತೋರಿದ್ದಾರೆ. ಅದನ್ನು ಈಗ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದೀರಾ? ನಟ ಇಷ್ಟವಾದರೆ ಶಿಳ್ಳೆ ಹೊಡೆಯಬಹುದು, ಆದರೆ, ಅವರಿಗೆ ದೇಶ ಆಳ್ವಿಕೆ ಮಾಡುವ ಅಧಿಕಾರ ಕೊಡಲು ಸಾಧ್ಯವಿಲ್ಲ. ರಾಜಕೀಯ ಬೇರೆ ಸಿನಿಮಾ ಬೇರೆ. ಪ್ರೀತಿ ಬೇರೆ ಜವಾಬ್ದಾರಿ ಬೇರೆ. ಜನರ ನಾಯಕನಾಗಬೇಕು ಎಂದರೆ, ಬೇರಿನಿಂದ ಕೆಲಸ ಶುರುಮಾಡಬೇಕು ಎಂದು ಹೇಳಿದರು.

ಜನರ ಜೊತೆ ಕೆಲಸ ಮಾಡಿ

ನಟ ಹಾಗೂ ರಾಜಕಾರಣಿಯಾದ ಸೀಮನ್​ ಅವರು ಕಳೆದ ಹತ್ತು ವರ್ಷಗಳಿಂದ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಇಂಥ ಜನರು ರಾಜಕೀಯಕ್ಕೆ ಬರಬೇಕು. ಅವರ ಹೋರಾಟದಿಂದ ಸಾಮಾನ್ಯ ಜನರಿಗಾಗುವ ಪ್ರಯೋಜನ ಅತ್ಯಗತ್ಯ ಎಂದು ಹೇಳಿದರು.
ಗಿಲ್ಲಿ, ಶಿವಕಾಸಿ, ವಾರಿಸುದಂತಹ ಹಿಟ್ ಸಿನಿಮಾಗಳಲ್ಲಿ ವಿಜಯ್​ ಜೊತೆ ಪ್ರಕಾಶ್​ ರಾಜ್​​ ನಟಿಸಿದ್ದಾರೆ. ಕಳೆದ ವರ್ಷವಷ್ಟೇ ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಶುಭ ಕೋರಿದ್ದ ಪ್ರಕಾಶ್ ರಾಜ್, ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಅವರ ರಾಜಕೀಯ ನಡೆಯನ್ನು ಪ್ರಶ್ನೆ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net