ಸಂದರ್ಶನದ ಹೇಳಿಕೆ ಭಾರಿ ವಿವಾದ ಹಾಗೂ ಚರ್ಚೆಗೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಹುವಾ, Xನಲ್ಲಿ ಮತ್ತೊಂದು ಪೋಸ್ಟ್ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಸುವೇಂದು ಅವರೇನೂ ದೇವದೂತರಲ್ಲ. ಆದರೆ, ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಇರಿಯುವ ಇತರ ದೇಶದ್ರೋಹಿಗಳಂತೆ ಮಾಡದೆ, ಧೈರ್ಯವಾಗಿ ಟಿಎಂಸಿ ತೊರೆದು ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವ ಗಟ್ಸ್ ಅವರಿಗೆ ಇತ್ತು ಎಂದು ಬರೆದಿದ್ದಾರೆ.