ನಿತೀಶ್ಗೆ ‘ಸುಶಾಸನ್ ಬಾಬು’ (ಉತ್ತಮ ಆಡಳಿತಗಾರ) ಎಂಬ ಹೆಸರು ಬಂದಿದ್ದು ಅವರ ಆಡಳಿತ ವೈಖರಿಯಿಂದ. ಬಿಹಾರದಲ್ಲಿದ್ದ ಅರಾಜಕತೆಯನ್ನು (ಜಂಗಲ್ ರಾಜ್) ತೊಲಗಿಸಿ, ಹಲವು ಸುಧಾರಣೆಗಳನ್ನು ತಂದರು. ಕಾನೂನು-ಸುವ್ಯವಸ್ಥೆ ಸುಧಾರಣೆ, ಫಾಸ್ಟ್ ಟ್ರಾ್ಯಕ್ ನ್ಯಾಯಾಲಯಗಳ ಸ್ಥಾಪನೆ, ಹೆಣ್ಣುಮಕ್ಕಳು ಶಾಲೆಗೆ ಬರುವಂತೆ ಮಾಡಲು ‘ಬಾಲಿಕಾ ಸೈಕಲ್ ಯೋಜನೆ’ ಜಾರಿ, ಬಿಹಾರದ ಮೂಲೆ ಮೂಲೆಯ ಹಳ್ಳಿಗಳಿಗೂ ರಸ್ತೆ, ವಿದ್ಯುತ್ ಸಂಪರ್ಕ, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ, ಮದ್ಯಪಾನ ನಿಷೇಧ ಮುಂತಾದವು ಅವರ ಆಡಳಿತಾವಧಿಯ ಹೈಲೈಟ್ಗಳು.