ಭಾರತದ ಐಷಾರಾಮಿ ಬಸ್ ಪ್ರಯಾಣಕ್ಕೆ ಮನಸೋತ ಪೋಲೆಂಡ್ ಹುಡ್ಗಿ; ಹೊಟ್ಟೆ ಬಿರಿಯುವಷ್ಟು ಆಹಾರ, ಸ್ವಚ್ಛತೆ ಬಗ್ಗೆ ಪೋಸ್ಟ್..Polish Woman

Polish Woman Impressed During Her First Indian Bus Ride
Polish Woman Impressed During Her First Indian Bus Ride
Published on
Polish Woman Impressed During Her First Indian Bus Ride: ಇತ್ತೀಚೆಗೆ ಹಲವರು ಭಾರತದ ರೈಲಿನಲ್ಲಿ ಪ್ರಯಾಣಿಸಿ, ಇಲ್ಲಿನ ವ್ಯವಸ್ಥೆ ಬಗ್ಗೆ ಟೀಕೆ ಮಾಡಿ ಫೋಸ್ಟ್​ ಹಂಚಿಕೊಂಡಿದ್ದರು. ಸಾಲು ಸಾಲು ಟೀಕೆಗಳ ಮಧ್ಯೆ ಪೋಲೆಂಡ್​ನ ಯುವತಿಯೊಬ್ಬರು ಮೊದಲ ಬಾರಿಗೆ ಇಲ್ಲಿನ ಬಸ್​ನಲ್ಲಿ ಪ್ರಯಾಣಿಸಿದ ಅನುಭವ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. ಜೊತೆಗೆ ಭಾರತದ ಸಾರಿಗೆ ವ್ಯವಸ್ಥೆ ಬಗ್ಗೆ ವ್ಯಂಗ್ಯವಾಡುವ ಕೆಲವು ವಿದೇಶಿಗರಿಗೆ ಟಾಂಗ್ ಕೊಟ್ಟಿದ್ದಾರೆ.
ಪೋಲಿಷ್​ ಯುವತಿ ಡೊಮಿನಿಕಾ ಪಟಾಲಸ್-ಕಲ್ರಾ, ದೆಹಲಿಗೆ 11 ಗಂಟೆಗಳ ಪ್ರಯಾಣಿಸಿ, ಇಲ್ಲಿನ ಬಸ್​ಗಳ ಸ್ವಚ್ಛತೆ, ಆಧುನಿಕ ವ್ಯವಸ್ಥೆ, ಐಷಾರಾಮಿ ಸ್ವಾಗತ, ಊಟಕ್ಕೆ ಬಫೆಟ್​ ಸಿಸ್ಟಂ ಅನುಸರಿಸಿದ ಬಗ್ಗೆ ಕೊಂಡಾಡಿದ್ದಾರೆ. ಜೊತೆಗೆ ಮೊದಲ ಪ್ರಯಾಣ ನಿರಾಸೆಯನ್ನುಂಟು ಮಾಡಿಲ್ಲ ಎಂದು ಹೇಳಿದ್ದಾರೆ.
📄 Embedded Content

ಪೋಸ್ಟ್​ನಲ್ಲಿ ಏನಿದೆ?

ಡೊಮಿನಿಕಾ ಪಟಾಲಸ್-ಕಲ್ರಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಭಾರತದಲ್ಲಿ ಇದು ನನ್ನ ಮೊದಲ ಬಸ್ ಪ್ರಯಾಣ. ನಾನು 11 ಗಂಟೆ ದೆಹಲಿಗೆ ಪ್ರಯಾಣಿಸಿದೆ. ಈ ಪ್ರಯಾಣ ಕಷ್ಟಕರವಾಗಿರಬಹುದು ಎನ್ನುವುದು ನನ್ನ ಆಲೋಚನೆಯಾಗಿತ್ತು. ಆದರೆ ನಿಜ ಹೇಳಬೇಕು ಎಂದರೆ ಆರಾಮದಾಯಕವಾಗಿತ್ತು. ನನ್ನ ಪ್ರಯಾಣ ಆರಂಭಿಸಿದ ನಂತರ ನನಗೆ ಗಿಫ್ಟ್​ ಕೊಡಲಾಗಿತ್ತು. ವೆಟ್​ ಟಿಶ್ಯೂ, ರಸ ಹಾಗೂ ಬೆಡ್​ಶೀಟ್​ ಸೌಲಭ್ಯ, ರುಚಿಕರವಾದ ಊಟ ಜಾಮುನ್​​ ಬಫೆಟ್​ ಸಿಸ್ಟಂನಲ್ಲಿತ್ತು. ಬೆಳಿಗ್ಗೆ ಮತ್ತೆ ತಿಂಡಿ ಕಿಟ್​ ಸಿಕ್ಕಿತ್ತು. ನನಗೆ ಹಸಿವೇ ಆಗಲಿಲ್ಲ. ಸೀಟುಗಳು ಆರಾಮದಾಯಕವಾಗಿತ್ತು. ಮುಖ್ಯವಾಗಿ ಮುಂಜಾನೆ ಸರಿಯಾದ ಸಮಯಕ್ಕೆ ಬಸ್​​ ಗಮ್ಯ ಸ್ಥಾನಕ್ಕೆ ತಲುಪಿತ್ತು ಎಂದಿದ್ದಾರೆ.

ನೆಟ್ಟಿಗರು ಏನಂದ್ರು?

ನೀವು ಭಾರತವನ್ನು ಸಕರಾತ್ಮಕವಾಗಿ ತೋರಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ನಮ್ಮ ದೇಶಕ್ಕೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ.ಭಾರತಕ್ಕೆ ಬಂದಿದ್ದು ಸಂತೋಷ. ಈಶಾನ್ಯ ಭಾರತದ ಏಳು ಸಹೋದರಿ ರಾಜ್ಯಗಳನ್ನು ಭೇಟಿ ಮಾಡಿ ಎಂದು ಕೇಳಿಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net