ಗಂಗಾ ನದಿಯಲ್ಲಿ ಬಿಯರ್ ಕುಡಿದು ಉದ್ಧಟತನ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಯುವಕನ ಹೆಡೆಮುರಿಕಟ್ಟಿದ ಖಾಕಿ! Drinking Beer in Ganga

ಪವಿತ್ರ ಗಂಗಾ ನದಿಯಲ್ಲಿ ಬಿಯರ್​ ಕುಡಿದ ಯುವಕ
ಪವಿತ್ರ ಗಂಗಾ ನದಿಯಲ್ಲಿ ಬಿಯರ್​ ಕುಡಿದ ಯುವಕ
Published on

ಪ್ರಮುಖ ಮುಖ್ಯಾಂಶಗಳು

  • ಪವಿತ್ರ ಗಂಗಾ ನದಿಯಲ್ಲಿ ಬಿಯರ್​ ಕುಡಿದ ಯುವಕ
  • ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್​ ಇಲಾಖೆ
  • ಆರೋಪಿಯನ್ನು ಬಂಧಿಸಲು ಬಿಹಾರಕ್ಕೆ ತೆರಳಿರುವ ಖಾಕಿ ಪಡೆ
  • ಧಾರ್ಮಿಕ ಭಾವನೆಗೆ ಚ್ಯುತಿತಂದ ಹಿನ್ನಲೆ ಪ್ರಕರಣ ದಾಖಲು
ವಾರಣಾಸಿ: ಭಾರತೀಯರು ಕೇವಲ ದೇವಾಲಯದಲ್ಲಿ ಮಾತ್ರ ದೇವರನ್ನು ಕಾಣುವವರಲ್ಲ, ನದಿ, ಬೆಟ್ಟ ಸೇರಿದಂತೆ ಪ್ರಪಂಚದ ಅಣು-ಅಣುವಿನಲ್ಲೂ ದೇವರನ್ನು ಕಾಣುತ್ತಾರೆ. ಒಂದರ್ಥದಲ್ಲಿ ಇವರನ್ನು ಪ್ರಕೃತಿ ಆರಾಧಕರೆಂದರೂ ಅತಿಷಯೋಕ್ತಿ ಇಲ್ಲ.
ಆದರೆ ಕೆಲ ದಿನಗಳಹಿಂದೆ ಭಾರತದ ಪವಿತ್ರ ನದಿ, ಜೀವನದಿಯೆಂದೇ ಕರೆಯಲ್ಪಡುವ ಗಂಗಾನದಿಯಲ್ಲಿ ವ್ಯಕ್ತಿಯೊಬ್ಬ ಮಧ್ಯ ಸೇವಿಸುತ್ತಿರುವ (Drinking Beer in Ganga) ವಿಡಿಯೋವೊಂದು ವೈರಲ್​ ಆಗಿದ್ದು, ಈಗ ಆತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.

ವೈರಲ್​ ವಿಡಿಯೋನಲ್ಲೇನಿದೆ?

ಸೋಷಿಯಲ್​ ಮೀಡಿಯಾನಲ್ಲಿ ಹರಿದಾಡುತ್ತಿದ್ದ ವಿಡಿಯೋನಲ್ಲಿ ಮದ್ಯ ವಯಸ್ಸಿನ ಯುವಕನೊಬ್ಬ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾ, ಬಿಯರ್​ ಹೀರುತ್ತಿರುವ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ವಿಡಿಯೋ ಎಲ್ಲಡೆ ವೈರಲ್​ ಆಗುತ್ತಿದ್ದಂತೆ ಸನಾತನಿಗಳ ಕೋಪ ನೆತ್ತಿಗೇರಿದ್ದು, ಪೂಜ್ಯನೀಯ ನದಿಯಲ್ಲಿ ಸ್ನಾನ ಮಾಡಿ ಪಾಪ ತೊಳೆದುಕೊಳ್ಳುವ ಬದಲು, ನೀರನ್ನು ಮಲೀನ ಮಾಡುವ ಜೊತೆಗೆ ಅಲ್ಲಿ ಅನಾಗರಿಕ ವರ್ತನೆ ತೋರಿದ ವ್ಯಕ್ತಿ ವಿರುದ್ಧ ಕಠಿಣ ಕ್ರಮದ ಆಗ್ರಹ ಜನರದ್ದಾಗಿತ್ತು.

ಪೋಲಿಸರಿಂದ ಕಠಿಣ ಕ್ರಮ!

ಗಂಗಾ ನದಿಯಲ್ಲಿ ಬಿಯರ್​ ಹೀರಿದ ಪ್ರಕರಣವನ್ನು ಬೆನ್ನತ್ತಿದ ವಾರಣಾಸಿ ಪೊಲೀಸರು, ಆ ಯುವಕನನ್ನು ಬಂಧಿಸಲು ಬಿಹಾರಕ್ಕೆ ತಮ್ಮ ತಂಡವನ್ನು ಕಳುಹಿಸಿದ್ದಾಗಿ ಎಸಿಪಿ ಅತುಲ್ ಅಂಜನ್ ತ್ರಿಪಾಠಿ ತಿಳಿಸಿದ್ದಾರೆ. ಜನರ ಧಾರ್ಮಿಕ ನಂಬಿಕೆಗೆ ಚ್ಯುತಿ ತಂದಿರುವ ಹಾಗೂ ಜೀವಜಲವನ್ನು ಮಲೀನ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಮಾಮಿ ಗಂಗೆ ಯೋಜನೆ

ಭಾರತದ ಅತ್ಯಂತ ಪವಿತ್ರ ಮತ್ತು ಪ್ರಮುಖ ನದಿಯಾದ ಗಂಗೆಯನ್ನು ಮಾಲಿನ್ಯಮುಕ್ತಗೊಳಿಸಲು ಕೇಂದ್ರ ಸರ್ಕಾರವು ಜೂನ್ 2014 ರಲ್ಲಿ ‘ನಮಾಮಿ ಗಂಗೆ’ (Namami Gange Programme) ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿತು. ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಗಂಗಾ ನದಿ ಸ್ವಚ್ಛತಾ ಮಿಷನ್ (NMCG) ಈ ಯೋಜನೆಯ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.
ಗಂಗಾ ನದಿಯು ಉತ್ತರಾಖಂಡದಿಂದ ಪಶ್ಚಿಮ ಬಂಗಾಳದವರೆಗೆ ಸುಮಾರು 2,525 ಕಿಲೋಮೀಟರ್‌ಗಳಿಗೂ ಹೆಚ್ಚು ದೂರ ಹರಿಯಲಿದ್ದು, ಕೋಟ್ಯಂತರ ಜನರ ಜೀವನೋಪಾಯಕ್ಕೆ ಆಧಾರವಾಗಿದೆ. ಆದರೆ, ನದಿಯ ದಡದಲ್ಲಿರುವ ನಗರಗಳ ಕೊಳಚೆ ನೀರು, ಕೈಗಾರಿಕಾ ರಾಸಾಯನಿಕ ತ್ಯಾಜ್ಯಗಳು, ಮತ್ತು ಧಾರ್ಮಿಕ ವಿಧಿವಿಧಾನಗಳ ಅವಶೇಷಗಳು ನದಿಯನ್ನು ತೀವ್ರವಾಗಿ ಕಲುಷಿತಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ನದಿಯ ಸಂಪೂರ್ಣ ಪುನರುಜ್ಜೀವನ ಮತ್ತು ಸಂರಕ್ಷಣೆಯ ಉದ್ದೇಶಗಳೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net