ಸ್ಟಾಲಿನ್ ಸರ್ಕಾರಕ್ಕೆ ಗೇಟ್‌ಪಾಸ್‌ ನೀಡಲು ರಾಜ್ಯದ ಜನತೆ ಸಿದ್ಧ; ಭೇಟಿಗೂ ಮುನ್ನವೇ ಡಿಎಂಕೆ ವಿರುದ್ಧ ಪ್ರಧಾನಿ ಮೋದಿ ಘರ್ಜನೆ! | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಚೆನ್ನೈ: ಎನ್‌ಡಿಎ ಆಡಳಿತದ ಮಾದರಿ ಮತ್ತು ಪ್ರಾದೇಶಿಕ ಆಕಾಂಕ್ಷೆಗಳ ಮೇಲಿನ ಗಮನವು ತಮಿಳುನಾಡಿನ ಜನರಲ್ಲಿ ಪ್ರತಿಧ್ವನಿಸುತ್ತಿದ್ದು, ಭ್ರಷ್ಟ ಡಿಎಂಕೆ ಸರ್ಕಾರಕ್ಕೆ ವಿದಾಯ ಹೇಳಲು ರಾಜ್ಯ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತಮಿಳುನಾಡು ಪ್ರವಾಸ ಕೈಗೊಳ್ಳುವ ಮುನ್ನ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ಹಂಚಿಕೊಂಡಿರುವ ಪ್ರಧಾನಿ ಮೋದಿ, ತಮಿಳುನಾಡು ಎನ್‌ಡಿಎ ಮೈತ್ರಿಕೂಟದ ಜೊತೆಗಿದ್ದು, ಇಂದು ಮಧುರಾಂತಕಂನಲ್ಲಿ ನಡೆಯಲಿರುವ ಸಭೆಯಲ್ಲಿ ನಾನು ಎನ್‌ಡಿಎ ನಾಯಕರೊಂದಿಗೆ ಪಾಲ್ಗೊಳ್ಳಲಿದ್ದೇನೆ, ಭ್ರಷ್ಟ ಡಿಎಂಕೆ ಸರ್ಕಾರಕ್ಕೆ ವಿದಾಯ ಹೇಳಲು ಇದು ಸೂಕ್ತ ಸಮಯವಾಗಿದ್ದು, ಎನ್‌ಡಿಎ ಸರ್ಕಾರ ವಿಶ್ವಾಸಾರ್ಹತೆ ರಾಜ್ಯದ ಜನರನ್ನು ಮೆಚ್ಚಿಸುತ್ತಿದೆ ಎಂದರು.

ಪ್ರಧಾನಿಗೆ ಸ್ಟಾಲಿನ್​ ತಿರುಗೇಟು..

ಪ್ರಧಾನಿ ನರೇಂದ್ರ ಮೋದಿ ಎಕ್ಸ್​ ಪೋಸ್ಟ್​​ ಪ್ರತಿಕ್ರಿಯಿಸಿರುವ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್, ರಾಜ್ಯ ಎನ್​ಡಿಎದ ದ್ರೋಹಗಳನ್ನು ಒಂದೊಂದಾಗಿ ಎಣಿಸುತ್ತಿದ್ದು, ಪ್ರಧಾನಿಯವರು ಚುನಾವಣೆಯ ಸಮಯದಲ್ಲಿ ಮಾತ್ರ ತಮಿಳುನಾಡಿಗೆ ಭೇಟಿ ನೀಡುತ್ತಾರೆ, ಬಾಕಿ ಇರುವ ಕೇಂದ್ರದ ನಿಧಿಗಳು ಮತ್ತು ರಾಜ್ಯಕ್ಕೆ ಬರಬೇಕಿರುವ ಇತರ ಅನುದಾನದ ಸಮಸ್ಯೆ ಇನ್ನೂ ಏಕೆ ಬಗೆಹರಿಯಲಿಲ್ಲ ಎಂದು ಪ್ರಶ್ನಿಸಿದರು.
 3,458 ಕೋಟಿ ರೂ. ಸಮಗ್ರ ಶಿಕ್ಷಾ ಹಂಚಿಕೆಯನ್ನು ಬಿಡುಗಡೆ ಮಾಡುವಲ್ಲಿ ವಿಳಂಬ, ಗಡಿ ನಿರ್ಣಯದ ಸಮಯದಲ್ಲಿ ಕ್ಷೇತ್ರಗಳನ್ನು ಕಡಿಮೆ ಮಾಡುವ ಬಗ್ಗೆ ಮೌನ, ​​ರಾಜ್ಯಪಾಲರ ನಡವಳಿಕೆ ಮತ್ತು ಮಧುರೈನ ಏಮ್ಸ್​​ ಯೋಜನೆಯ ಸ್ಥಿತಿಯ ಬಗ್ಗೆ ಕೇಂದ್ರದ ನಡೆಯನ್ನು ಪ್ರಶ್ನಿಸಿದರು. ಹಣಕಾಸು ನೆರವು, ಮನರೇಗಾ ದಿನಗಳ ಮರುಸ್ಥಾಪನೆ ಮತ್ತು ಇತರ ಅಭಿವೃದ್ದಿ ಸಂಬಂಧಿತ ಹಂಚಿಕೆಗಳ ಬಗೆಗಿನ ಸ್ಪಷ್ಟತೆಯ ಬಗ್ಗೆ ಸ್ಟಾಲಿನ್​ ಒತ್ತಾಯಿಸುತ್ತಾ, ದ್ರೋಹಗಳಿಗೆ ಹೆಸರಾಗಿರುವ ಬಿಜೆಪಿ ಮೈತ್ರಿಕೂಟವನ್ನು ತಮಿಳುನಾಡಿನ ಜನರು ಸೋಲಿಸುತ್ತಾರೆ ಎಂದು ಹೇಳಿದರು.

ಮಧುರಾಂತಕಂ ಸಭೆಗೆ ಎನ್​ಡಿಎ ಸಜ್ಜು

ಪ್ರಧಾನಿ ಮೋದಿ ಶುಕ್ರವಾರ ಮಧುರಾಂತಕಂನಲ್ಲಿ ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದು. ಆಡಳಿತಾರೂಢ ಡಿಎಂಕೆ ವಿರುದ್ಧದ ಪ್ರಚಾರಕ್ಕೆ ನಾಂದಿ ಹಾಡಲಿದ್ದಾರೆ. ಈ ವೇಳೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸೇರಿದಂತೆ ಮೈತ್ರಿಕೂಟದ ಅನೇಕ ಹಿರಿಯ ನಾಯಕರು ಉಪಸ್ಥಿತರಿರುವ ನಿರೀಕ್ಷೆಯಿದೆ.
ಈ ಸಭೆಯ ವಿಷಯವಾಗಿ ಬಿಜೆಪಿಯ ತಮಿಳುನಾಡು ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್ ಮಾಹಿತಿ ಹಂಚಿಕೊಂಡಿದ್ದು, ಇದು ರಾಜ್ಯದ ರಾಜಕೀಯ ಭೂದೃಶ್ಯದಲ್ಲಿ ಪ್ರಮುಖ ಕ್ಷಣವಾಗಿದೆ, ಪ್ರಧಾನಿ ಮೋದಿ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿಯವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ತಮಿಳುನಾಡಿನಲ್ಲಿ ಎನ್​ಡಿಎದ ಚುನಾವಣಾ ಪ್ರಚಾರದ ಆರಂಭವನ್ನು ಸೂಚಿಸುತ್ತದೆ. 
ಇದು ಡಿಎಂಕೆ ಭ್ರಷ್ಟಾಚಾರದಿಂದ ತುಂಬಿದ ಸರ್ಕಾರವನ್ನು ಕೊನೆಗೊಳಿಸುವ ಮತ್ತು ಪ್ರತಿಯೊಂದು ವರ್ಗಕ್ಕೂ ಉತ್ತಮ ಆಡಳಿತ, ಅವಕಾಶಗಳು ಮತ್ತು ಸಮೃದ್ಧಿಯನ್ನು ತರುವ ಮೊದಲ ಹೆಜ್ಜೆಯಾಗಿದ್ದು. ಈ ಬಾರಿ ಎನ್​ಡಿಎ ಮೈತ್ರಿಕೂಟ ತಮಿಳುನಾಡಿನಲ್ಲಿ ಪ್ರಕಾಶಿಸುತ್ತದೆ ಎಂದು ಬರೆದಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net