ಕಾರ್ಯಕ್ರಮದಲ್ಲಿ ತಡವಾಗಿ ಪಾಲ್ಗೊಂಡಿದ್ದಕ್ಕೆ ಕ್ಷಮೆಯಾಚಿಸಿದ ಪ್ರಧಾನಿ, ಕೊಯಮತ್ತೂರಿಗೆ ಬರುವ ಮೊದಲು ಪುಟ್ಟಪರ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು. ತಮಿಳು ಗೊತ್ತಿದ್ದರೆ, ಶೃಂಗಸಭೆಯಲ್ಲಿನ ಹಿಂದಿನ ಭಾಷಣಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಗೌರವ ಸಿಗುತ್ತಿತ್ತು ಎಂದರು. ಕೊಯಮತ್ತೂರಿನ ಜವಳಿ ವಲಯವು ದೇಶದ ಆರ್ಥಿಕತೆಗೆ ಬಹಳ ಹಿಂದಿನಿಂದಲೂ ಪ್ರಮುಖ ಕೊಡುಗೆ ನೀಡಿದೆ, ಈ ಪ್ರದೇಶದವರಾದ ಸಿ ಪಿ ರಾಧಾಕೃಷ್ಣನ್ ಅವರು ಭಾರತದ ಉಪ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸುತ್ತಿರುವುದರಿಂದ, ರಾಷ್ಟ್ರಕ್ಕೆ ಈ ಭಾಗದ ಕೊಡುಗೆ ಹೆಚ್ಚಿದೆ ಎಂದು ಹೇಳಿದರು(ಏಜೆನ್ಸೀಸ್).