ಹೊಸ ಇತಿಹಾಸ ಬರೆದ ಪ್ರಧಾನಿ ಮೋದಿ! ನಾಳೆಯಿಂದಲೇ ಓಡಲಿದೆ ದೇಶದ ಮೊದಲ ಹೈಡ್ರೋಜನ್​ ಟ್ರೈನ್​..ಇಲ್ಲಿದೆ ಅದರ ಕಂಪ್ಲೀಟ್ ಡಿಟೇಲ್ಸ್ First Hydrogen Train

First Hydrogen Train ಸಾಂದರ್ಭಿಕ ಚಿತ್ರ
First Hydrogen Train ಸಾಂದರ್ಭಿಕ ಚಿತ್ರ
Published on
ಚಂಡೀಗಢ: ಭಾರತೀಯ ರೈಲ್ವೆ ಇತಿಹಾಸದಲ್ಲಿ ಶುಕ್ರವಾರ (ಜುಲೈ 17) ಮತ್ತೊಂದು ಸುವರ್ಣ ಅಕ್ಷರಗಳಲ್ಲಿ ಬರೆಯಲ್ಪಡುವ ದಿನ. ಪರಿಸರ ಸ್ನೇಹಿ ಮತ್ತು ಹಸಿರು ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಮೊಟ್ಟಮೊದಲ ಹೈಡ್ರೋಜನ್ ಚಾಲಿತ (First Hydrogen Train) ರೈಲಿಗೆ ಹರಿಯಾಣದ ಜಿಂದ್‌ನಿಂದ ಅಧಿಕೃತವಾಗಿ ಹಸಿರು ನಿಶಾನೆ ತೋರಲಿದ್ದಾರೆ.

ಜಿಂದ್ - ಸೋನಿಪತ್ ನಡುವೆ ಸಂಚಾರ

ಭಾರತದಲ್ಲಿ ಇದೇ ಮೊದಲ ಬಾರಿಗೆ ಪರಿಸರ ಸ್ನೇಹಿ ಹಾಗೂ ಸಂಪೂರ್ಣ ಮಾಲಿನ್ಯಮುಕ್ತ ಹೈಡ್ರೋಜನ್ ರೈಲನ್ನು ಪರಿಚಯಿಸಲಾಗುತ್ತಿದ್ದು, ಪ್ರಾಯೋಗಿಕವಾಗಿ ಇದು ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಓಡಲಿದೆ. ಇದು ದೇಶದ ಇಂಧನ ದಕ್ಷತೆ ಮತ್ತು ಆಧುನಿಕ ಸಾರಿಗೆ ವ್ಯವಸ್ಥೆಗೆ ಸಂದ ಜಾಗತಿಕ ಯಶಸ್ಸಾಗಿದೆ. ಭಾರತವನ್ನು ಇಂಗಾಲ ಮುಕ್ತ ದೇಶವನ್ನಾಗಿ ಮಾಡುವ ಸರ್ಕಾರದ ದೊಡ್ಡ ಕನಸಿಗೆ ಈ ಐತಿಹಾಸಿಕ ಯೋಜನೆ ಪ್ರಮುಖ ಮೈಲಿಗಲ್ಲಾಗಲಿದೆ.

ವಿಶ್ವದ ಗಣ್ಯ ರಾಷ್ಟ್ರಗಳ ಸಾಲಿಗೆ ಸೇರಿದ ಭಾರತ!

ಪ್ರಸ್ತುತ ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನವು ಜಗತ್ತಿನಲ್ಲಿ ಇನ್ನೂ ಆರಂಭಿಕ ಹಂತದಲ್ಲಿದೆ. ಹೀಗಾಗಿ ತೀರಾ ಕೆಲವೇ ದೇಶಗಳು ಮಾತ್ರ ಈ ವ್ಯವಸ್ಥೆಯನ್ನು ಹೊಂದಿವೆ. ಈ ರೈಲಿನ ಉದ್ಘಾಟನೆಯೊಂದಿಗೆ ಭಾರತವು ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದಂತಹ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕೆಲವೇ ಕೆಲವು ಆಯ್ದ ರಾಷ್ಟ್ರಗಳ ಸಾಲಿಗೆ ಹೆಮ್ಮೆಯಿಂದ ಸೇರ್ಪಡೆಯಾಗಲಿದೆ.

ಹೇಗೆ ಕೆಲಸ ಮಾಡುತ್ತೆ ಈ ಹೈಡ್ರೋಜನ್ ತಂತ್ರಜ್ಞಾನ?

ಈ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನದಲ್ಲಿ ಹೈಡ್ರೋಜನ್ ಬಳಸಿ ರಾಸಾಯನಿಕ ಪ್ರಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇದರ ಅತ್ಯಂತ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಈ ರೈಲಿನಿಂದ ಯಾವುದೇ ಹಾನಿಕಾರಕ ಹೊಗೆ ಹೊರಬರುವುದಿಲ್ಲ, ಬದಲಿಗೆ ಕೇವಲ ನೀರಿನ ಆವಿ ಮಾತ್ರ ಹೊರಬರುತ್ತದೆ. ಹೀಗಾಗಿ ಸಾಂಪ್ರದಾಯಿಕ ಪೆಟ್ರೋಲಿಯಂ ಅಥವಾ ಡೀಸೆಲ್ ಎಂಜಿನ್‌ಗಳಿಗೆ ಹೋಲಿಸಿದರೆ ಇದು ಶೇ. 100 ರಷ್ಟು ಸ್ವಚ್ಛ ಮತ್ತು ಪರಿಸರ ಸ್ನೇಹಿ ಪರ್ಯಾಯವಾಗಿದೆ.

ಸುರಕ್ಷತೆಗೆ ಸಿಕ್ಕಿದೆ ಗ್ರೀನ್ ಸಿಗ್ನಲ್

ಈ ವಿಶೇಷ ರೈಲಿಗಾಗಿ ಜಿಂದ್‌ನಲ್ಲಿ ಸ್ವದೇಶಿ ಹೈಡ್ರೋಜನ್ ಶೇಖರಣೆ ಮತ್ತು ಮರುಪೂರಣ ಸೌಲಭ್ಯವನ್ನು ನಿರ್ಮಿಸಲಾಗಿದೆ. ತೈಲ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ ಈಗಾಗಲೇ ಈ ಸೈಟ್‌ನಲ್ಲಿ ಹೈಡ್ರೋಜನ್ ಗ್ಯಾಸ್ ಸಂಗ್ರಹಣೆ ಮತ್ತು ವಿತರಣೆಗೆ ಅಗತ್ಯವಿರುವ ಎಲ್ಲಾ ಪರವಾನಗಿಗಳನ್ನು ನೀಡಿದೆ. ತಾಂತ್ರಿಕ ದೋಷಗಳು ಬಾರದಂತೆ ಬ್ಯಾಕಪ್ ಸಂಕೋಚಕ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ಕಟ್ಟುನಿಟ್ಟಿನ ಭದ್ರತಾ ಕ್ರಮಗಳು!

ಹೈಡ್ರೋಜನ್ ಉತ್ಪಾದನೆ ಮತ್ತು ವಿತರಣಾ ಕೇಂದ್ರಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಹೈಡ್ರೋಜನ್ ಸೋರಿಕೆ ಪತ್ತೆಹಚ್ಚುವ ಡಿಟೆಕ್ಟರ್‌ಗಳು ಹಾಗೂ ಫ್ಲೇಮ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಧೂಳು ಸಂಗ್ರಹವಾಗದಂತೆ ಇವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತದೆ. ದೆಹಲಿಯ ಶಕುರ್ಬಸ್ತಿಯಲ್ಲಿ ಪ್ರಸ್ತಾವಿತ ನಿರ್ವಹಣಾ ಸೌಲಭ್ಯಕ್ಕಾಗಿ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳು ಮತ್ತು ಆಡಿಟ್‌ಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದ್ದು, ತರಬೇತಿ ಪಡೆದ ತಜ್ಞರು 24/7 ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಆರಂಭಿಕ ಹಂತದಲ್ಲಿ ರೈಲು ಸುಗಮವಾಗಿ ಓಡಲು ತರಬೇತಿ ಪಡೆದ ತಾಂತ್ರಿಕ ಸಿಬ್ಬಂದಿ ರೈಲಿನಲ್ಲೇ ಇರಲಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net