ಇಸ್ರೇಲ್​ PM ನೆತನ್ಯಾಹು ಜೊತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ: ಗಾಜಾ ಶಾಂತಿ ಒಪ್ಪಂದಕ್ಕೆ ಬೆಂಬಲ ಸೂಚಿಸಿದ ಭಾರತ

 PM Modi-Israel PM Netanyahu
PM Modi-Israel PM Netanyahu
Published on: 
ನವದೆಹಲಿ:ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ(ಡಿ.10) ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಂದ ಬಂದ ಫೋನ್ ಕರೆ ಸ್ವೀಕರಿಸಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಗಾಜಾ ಶಾಂತಿ ಯೋಜನೆಯ ಜಾರಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು.
ಅಧಿಕೃತ ಹೇಳಿಕೆ ಪ್ರಕಾರ, ಇಬ್ಬರೂ ನಾಯಕರು ಭಾರತ-ಇಸ್ರೇಲ್ ಸ್ಟ್ರ್ಯಾಟೆಜಿಕ್(ಕಾರ್ಯತಂತ್ರದ) ಪಾಲುದಾರಿಕೆಯನ್ನು ಬಲಪಡಿಸುವುದು, ಭಯೋತ್ಪಾದನೆಯನ್ನು ಖಂಡಿಸುವುದು ಮತ್ತು ಪಶ್ಚಿಮ ಏಷ್ಯಾದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರು. ಭಯೋತ್ಪಾದನೆಗೆ ಯಾವುದೇ ಸ್ಥಳದಲ್ಲಿ ಜೀರೋ ಟಾಲರೆನ್ಸ್ ಇರಬೇಕು ಎಂದು ಒಪ್ಪಂದವಾಗಿದೆ.
ಗಾಜಾ ಶಾಂತಿ ಯೋಜನೆ
ಪ್ರಧಾನಿ ಮೋದಿ ಪ್ರದೇಶದಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿಗಾಗಿ ಭಾರತದ ಬೆಂಬಲವನ್ನು ಒತ್ತಿ ಹೇಳಿದರು. ವಿಶೇಷವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ 20 ನಿಯಮಗಳ ಗಾಜಾ ಶಾಂತಿ ಯೋಜನೆಯ ತ್ವರಿತ ಜಾರಿಗೆ. ಈ ಯೋಜನೆಯ ಮೊದಲ ಹಂತದಲ್ಲಿ ಸೆಸ್‌ಫೈರ್, ಬಂಧನ ಆದವರ ಬಿಡುಗಡೆ ಮತ್ತು ಮಾನವೀಯ ಸಹಾಯವನ್ನು ಒಳಗೊಂಡಿದೆ.
ನೆತನ್ಯಾಹು ಅವರ ಭಾರತ ಭೇಟಿಯು ಮುಂದೂಡಿಕೆ ಆಗಿದೆ. ಇಬ್ಬರೂ ನಾಯಕರು ಭವಿಷ್ಯದಲ್ಲಿ ಸಂಪರ್ಕದಲ್ಲಿರುವುದಾಗಿ ಮಾತುಕತೆ ನಡೆಸಿದ್ದಾರೆ. ಇದು ಭಾರತ-ಇಸ್ರೇಲ್ ಸಂಬಂಧಗಳ ಬಲವನ್ನು ತೋರುತ್ತದೆ. ಈ ಮಾತುಕತೆಯು ಗಾಜಾ ಸಂಘರ್ಷದಲ್ಲಿ ಶಾಂತಿ ಪ್ರಕ್ರಿಯೆಯನ್ನು ಬೆಂಬಲಿಸುವ ಭಾರತದ ನಿಲುವನ್ನು ಮತ್ತೊಮ್ಮೆ ದೃಢಪಡಿಸುತ್ತದೆ,(ಏಜೆನ್ಸೀಸ್​).