ಯಾರೀ ಜೊನಾಥನ್​? ಡಿಜಿಟಲ್​ ಯುಗದಲ್ಲಿ ಬದುಕುತ್ತಿರುವ 193 ವರ್ಷ ಹಳೆಯ ಆಮೆ ನೋಡಲಿರುವ 'ನಮೋ'

193 ವರ್ಷ ಹಳೆಯ ಆಮೆ ಜೊನಾಥಾನ್​, ಪ್ರಧಾನಿ ನರೇಂದ್ರ ಮೋದಿ
193 ವರ್ಷ ಹಳೆಯ ಆಮೆ ಜೊನಾಥಾನ್​, ಪ್ರಧಾನಿ ನರೇಂದ್ರ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ವಾರ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರವಾದ ಸೆಶೆಲ್ಸ್‌ಗೆ ಪ್ರಧಾನಿ ಭೇಟಿ
  • 193 ವರ್ಷ ಹಳೆಯ ಆಮೆ ನೋಡಲಿರುವ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಮುಂದಿನ ವಾರ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರವಾದ ಸೆಶೆಲ್ಸ್‌ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ಸಂದರ್ಭದಲ್ಲಿ ಅಲ್ಲಿನ ವಿಶ್ವದ ಅತ್ಯಂತ ಹಿರಿಯ ಜೀವಿ ಎಂದೇ ಖ್ಯಾತಿ ಗಳಿಸಿರುವ 'ಜೊನಾಥನ್' ಎಂಬ 193 ವರ್ಷ ವಯಸ್ಸಿನ ಅಪರೂಪದ ಆಮೆಯನ್ನೂ ಭೇಟಿಯಾಗಲಿದ್ದಾರೆ.
ಮೋದಿ ಅವರ ಪ್ರವಾಸದ ಅತ್ಯಂತ ವಿಶಿಷ್ಟ ಹಾಗೂ ಆಕರ್ಷಕ ಆಂಶವೇ ಈ ಆಮೆ. ಗಿನ್ನಿಸ್​ ವಿಶ್ವ ದಾಖಲೆಯ ಮಾಹಿತಿ ಪ್ರಕಾರ , ಸೆಶೆಲ್ಸ್ ತಳಿಯ ಈ ದೈತ್ಯ ಆಮೆಯು 1832ರಲ್ಲಿ ಜನಿಸಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ, 2026ಕ್ಕೆ ಇದಕ್ಕೆ 194 ವರ್ಷ ವಯಸ್ಸು. ಜಾಗತಿಕ ಮಟ್ಟದಲ್ಲಿ ಭಾರಿ ಆಕರ್ಷಣೆಗೆ ಒಳಪಟ್ಟಿದೆ. ಇಷ್ಟು ವರ್ಷಗಳ ಕಾಲ ಒಂದು ಆಮೆಯ ಜೀವಿತಾವಧಿ ಇರುವುದು ಜೀವವಿಜ್ಞಾನಿಗಳು ಮತ್ತು ಸಂಶೋಧಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ವಯೋಸಹಜದಿಂದ ಕಣ್ಣಿನ ಪೊರೆ ಹಾಗೂ ದೇಹದಲ್ಲಿ ಶಕ್ತಿ ಕುಂಠಿತವಾಗಿದ್ದರೂ, ಪಶುವೈದ್ಯರ ಸೂಕ್ತ ಆರೈಕೆಯಿಂದಾಗಿ ಜೊನಾಥನ್ ಇಂದಿಗೂ ಆ್ಯಕ್ಟಿವ್​ ಆಗಿ ಓಡಾಡಿಕೊಂಡಿದೆ. ಜೊತೆಗೆ ಆರೋಗ್ಯವಾಗಿದೆ. ಇದು ನಿಜಕ್ಕೂ ಹುಬ್ಬೇರಿಸುವ ಸಂಗತಿಯೇ. ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಜಾಗತಿಕ ಸಂದೇಶವನ್ನು ಸಾರುವ ಸಲುವಾಗಿ ಪ್ರಧಾನಿ ಮೋದಿ ಇಲ್ಲಿನ ಉದ್ಯಾನವನದಲ್ಲಿ ಸಾಂಕೇತಿಕವಾಗಿ ಸಸಿಯೊಂದನ್ನು ನೆಡಲಿದ್ದಾರೆ.
ರಾಜತಾಂತ್ರಿಕವಾಗಿ ಅತ್ಯಂತ ಪ್ರಮುಖ ಪ್ರವಾಸಭಾರತ ಮತ್ತು ಸೆಶೆಲ್ಸ್ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ ಇಂದಿಗೆ 50 ವರ್ಷಗಳು ಪೂರ್ಣಗೊಂಡಿದ್ದು, ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಮೋದಿ ಅವರ ಭೇಟಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಸೆಶೆಲ್ಸ್‌ನ ರಾಷ್ಟ್ರೀಯ ದಿನಾಚರಣೆಯ ಸಂಭ್ರಮಕ್ಕೆ ಪ್ರಧಾನಿ ಮೋದಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಈ ಭೇಟಿಯ ಅವಧಿಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಸೆಶೆಲ್ಸ್ ನಾಯಕರೊಂದಿಗೆ ಮೋದಿ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net