ಪ್ರಧಾನಿ ಮೋದಿಯವರ ಪ್ರಚಾರದ ವೇಳಾಪಟ್ಟಿಯನ್ನು ಅತ್ಯಂತ ಚಾಣಾಕ್ಷತನದಿಂದ ವಿನ್ಯಾಸಗೊಳಿಸಲಾಗಿದ್ದು, ವಿಶೇಷವಾಗಿ 2024ರ ಚುನಾವಣೆಯಲ್ಲಿ ಟಿಎಂಸಿ ಅತ್ಯಲ್ಪ ಅಂತರದಿಂದ ಜಯಗಳಿಸಿದ ಕ್ಷೇತ್ರಗಳ ಮೇಲೆ ಮೋದಿ ಹೆಚ್ಚಿನ ಗಮನ ಹರಿಸಲಿದ್ದಾರೆ. ಈಗಾಗಲೇ ಏಪ್ರಿಲ್ 9 ರಂದು ಅಸನ್ಸೋಲ್, ತಮ್ಲುಕ್ ಮತ್ತು ಬಿರ್ಭುಮ್‌ನಲ್ಲಿ ಪ್ರಧಾನಿ ಬೃಹತ್ ಸಮಾವೇಶಗಳನ್ನು ನಡೆಸಿದ್ದು, ಈ ಮೂರು ಕ್ಷೇತ್ರಗಳು ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿವೆ ಮತ್ತು ಇಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ಪಡೆದುಕೊಳ್ಳಲು ಬಿಜೆಪಿ ಸಜ್ಜಾಗಿದೆ.