ಈ ಚುನಾವಣೆ ಕಾಂಗ್ರೆಸ್ ಪಾಲಿಗೆ ಶತಮಾನದ ಸೋಲು ಆಗಲಿದೆ, ಆ ಪಕ್ಷದ ಸ್ವಯಂ ಘೋಷಿತ ರಾಜಕುಮಾರ (ರಾಹುಲ್ ಗಾಂಧಿ) ಹ್ಯಾಟ್ರಿಕ್ ಸೋಲನ್ನು ಎದುರು ನೋಡುತ್ತಿದ್ದರೆ, ಅಸ್ಸಾಂನಲ್ಲಿ ಎನ್‌ಡಿಎ ಹ್ಯಾಟ್ರಿಕ್ ಗೆಲುವಿನತ್ತ ಮುನ್ನುಗ್ಗುತ್ತಿದೆ ಎಂದು ವ್ಯಂಗ್ಯವಾಡಿದ ಪ್ರಧಾನಿಯವರು, ಸಭೆಯಲ್ಲಿ ನೆರೆದಿದ್ದ ಬೃಹತ್ ಜನಸಾಗರವೇ ಬಿಜೆಪಿಯ ಮೂರನೇ ಬಾರಿಯ ಗೆಲುವಿಗೆ ಸಾಕ್ಷಿ ಎನ್ನುತ್ತಾ, ತಮಗೆ ಸಿಕ್ಕ ಹ್ಯಾಟ್ರಿಕ್ ಅವಕಾಶದಂತೆ, ಅಸ್ಸಾಂನಲ್ಲೂ ಜನರು ಬಿಜೆಪಿಗೆ ಮತ್ತೊಮ್ಮೆ ಆಶೀರ್ವಾದ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.