

ನವದೆಹಲಿ: ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅತ್ಯುತ್ತಮ ಸಾಧನೆಗೈದು ದೇಶಕ್ಕೆ ಕೀರ್ತಿ ತಂದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ (
PM Modi)
ಅವರು ತಮ್ಮ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ರಾಜ್ಯ ದರ್ಜೆ ಕ್ರೀಡಾ ಸಚಿವೆ ರಕ್ಷಾ ಖಡ್ಸೆ ಹಾಗೂ ಭಾರತೀಯ ಒಲಿಂಪಿಕ್ ಸಂಘದ (IOA) ಅಧ್ಯಕ್ಷೆ ಪಿ.ಟಿ. ಉಷಾ ಉಪಸ್ಥಿತರಿದ್ದರು.
ಸಂಭ್ರಮದ ವೇಳೆಯಲ್ಲೂ ದೇಶದ ಧ್ವಜಕ್ಕೆ ತೋರಿದ ಜಾಗರೂಕತೆ ಮತ್ತು ದೇಶಪ್ರೇಮವನ್ನು ಪ್ರಧಾನಿಯವರು ಮುಕ್ತಕಂಠದಿಂದ ಶ್ಲಾಘಿಸಿದ್ದು, ನಿಮ್ಮ ಈ ನಡೆಯ ವಿಡಿಯೋ ಸಾಮಾನ್ಯವಾದುದ್ದಲ್ಲ, ಇದು ಸಾರ್ವಜನಿಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ ಎಂದು ಪ್ರಶಂಸಿದರು.