ಜಿಲ್ಲಾವಾರು ಅಂಕಿಅಂಶಗಳ ಪ್ರಕಾರ ಕರೂರ್ ಜಿಲ್ಲೆಯಲ್ಲಿ ಶೇ. 92.48 ರಷ್ಟು ಗರಿಷ್ಠ ಮತದಾನವಾಗಿದ್ದರೆ, ಸೇಲಂನಲ್ಲಿ ಶೇ. 90.42, ಧರ್ಮಪುರಿಯಲ್ಲಿ ಶೇ. 90.02, ಈರೋಡ್‌ನಲ್ಲಿ ಶೇ. 89.97 ಮತ್ತು ನಾಮಕ್ಕಲ್‌ನಲ್ಲಿ ಶೇ. 89.63 ರಷ್ಟು ಮತದಾನ ದಾಖಲಾಗಿದೆ. ಚುನಾವಣಾ ಅಧಿಕಾರಿಗಳು ಪ್ರಸ್ತುತ ಅಂಕಿಅಂಶಗಳನ್ನು ಕ್ರೋಢೀಕರಿಸುತ್ತಿದ್ದು, ಅಂತಿಮ ಶೇಕಡಾವಾರು ಮತದಾನದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಬಾರಿಯ ಮತದಾನವು ತಮಿಳುನಾಡು ಚುನಾವಣಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ. 2011 ರಲ್ಲಿ ದಾಖಲಾಗಿದ್ದ ಶೇ. 78.29 ರಷ್ಟು ಮತದಾನವು ಈವರೆಗೆ ರಾಜ್ಯದ ಅತ್ಯಧಿಕ ದಾಖಲೆಯಾಗಿತ್ತು, ಆದರೆ ಈಗಿನ ಶೇ. 85 ರ ಮತದಾನವು ಅದನ್ನು ಮೀರಿಸಿದೆ.