Vikram-I orbiter rocket | ವಿಕ್ರಮ್-I ಆರ್ಬಿಟರ್ ರಾಕೆಟ್ ಉದ್ಘಾಟಿಸಿದ ಪ್ರಧಾನಿ ಮೋದಿ; ಈ ಕ್ಯಾಂಪಸ್​ ನಾವೀನ್ಯತೆ ಮತ್ತು ಯುವ ಶಕ್ತಿಯ ಪ್ರತಿಬಿಂಬವಾಗಿದೆ ಎಂದ ನಮೋ

Vikram-I orbiter rocket | ಇನ್ಫಿನಿಟಿ ಕ್ಯಾಂಪಸ್ ಮತ್ತು ವಿಕ್ರಮ್-I ಆರ್ಬಿಟರ್ ರಾಕೆಟ್ ಉದ್ಘಾಟಿಸಿದ ಪ್ರಧಾನಿ ಮೋದಿ
Vikram-I orbiter rocket | ಇನ್ಫಿನಿಟಿ ಕ್ಯಾಂಪಸ್ ಮತ್ತು ವಿಕ್ರಮ್-I ಆರ್ಬಿಟರ್ ರಾಕೆಟ್ ಉದ್ಘಾಟಿಸಿದ ಪ್ರಧಾನಿ ಮೋದಿ
Published on
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ (ನ.27) ವಿಡಿಯೋ ಕಾನ್ಫರೆನ್ಸ್​ ಮೂಲಕ ಹೈದರಾಬಾದ್‌ನ ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಮತ್ತು ವಿಕ್ರಮ್-I ಆರ್ಬಿಟರ್ ರಾಕೆಟ್ ಉದ್ಘಾಟಿಸಿದರು.
ರಾಕೆಟ್​ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಭಾರತದ ಹೊಸ ಚಿಂತನೆ, ನಾವೀನ್ಯತೆ ಮತ್ತು ಯುವ ಶಕ್ತಿಯ ಪ್ರತಿಬಿಂಬವಾಗಿದೆ, ಸ್ಕೈರೂಟ್‌ನ ಸಂಸ್ಥಾಪಕರಾದ ಪವನ್ ಚಂದನ ಮತ್ತು ಭರತ್ ಡಕಾ ದೇಶದ ಯುವಕರಿಗೆ ದೊಡ್ಡ ಸ್ಫೂರ್ತಿ ಎಂದು ಶ್ಲಾಘಿಸಿದರು.

ಭಾರತದ ಪ್ರಯಾಣದ ಕುರಿತು ಪ್ರಧಾನಿ ಭಾಷಣ

ಭಾರತದ ಬಾಹ್ಯಾಕಾಶ ಪ್ರಯಾಣವು ಅತ್ಯಂತ ಸೀಮಿತ ಸಂಪನ್ಮೂಲಗಳೊಂದಿಗೆ ಪ್ರಾರಂಭವಾಗಿದ್ದು. ಆದರೆ ನಮ್ಮ ಆಕಾಂಕ್ಷೆಗಳಿಗೆ ಯಾವುದೇ ಸೀಮಿತತೆ ಇರಲಿಲ್ಲ. ರಾಕೆಟ್ ಭಾಗವನ್ನು ಸೈಕಲ್‌ನಲ್ಲಿ ಸಾಗಿಸುತ್ತಿದ್ದ ಕಾಲವೊಂದಿತ್ತು. ಇಂದು, ಭಾರತವು ವಿಶ್ವದ ಅತ್ಯಂತ ವಿಶ್ವಾಸಾರ್ಹ ಉಡಾವಣೆಯೊಂದರ ರಚನಾಕಾರನಾಗಿ ತನ್ನ ಸ್ಥಾನವನ್ನು ಗಳಿಸಿಕೊಂಡಿದೆ. ನಮ್ಮ ಕನಸುಗಳ ಎತ್ತರವನ್ನು ಸಂಪನ್ಮೂಲಗಳಿಂದಲ್ಲ, ಬದಲಾಗಿ ಸಂಕಲ್ಪದಿಂದ ನಿರ್ಧರಿಸಬೇಕಾಗುತ್ತದೆ, ಇದನ್ನು ಭಾರತ ಸಾಬೀತುಪಡಿಸಿ ತೋರಿಸಿದೆ ಎಂದು ಹೇಳಿದರು.
ಭಾರತೀಯ ಬಾಹ್ಯಾಕಾಶ ಪ್ರತಿಭೆ ಜಾಗತಿಕ ಮಾರುಕಟ್ಟೆಗೆ ಆಕರ್ಷಕ ತಾಣವಾಗುತ್ತಿದೆ, ಪ್ರಪಂಚದಾದ್ಯಂತ ಬಲವಾದ ಗುರುತನ್ನು ಸ್ಥಾಪಿಸಿದೆ. ಸಣ್ಣ ಉಪಗ್ರಹಗಳಿಗೆ ಬೇಡಿಕೆ ವಿಶ್ವಾದ್ಯಂತ ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಬಾಹ್ಯಾಕಾಶವನ್ನು ಸದ್ಯ ಕಾರ್ಯತಂತ್ರದ ಆಸ್ತಿಯನ್ನಾಗಿ ಗುರುತಿಸಲಾಗಿದೆ. ಭವಿಷ್ಯದಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು ಹಲವು ಪಟ್ಟು ವಿಸ್ತರಿಸಲಿದ್ದು, ಇದು ಭಾರತದ ಯುವಕರಿಗೆ ಮಹತ್ವದ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಉದ್ಘಾಟಿಸಿದ ಕ್ಯಾಂಪಸ್​...

ಇನ್ಫಿನಿಟಿ ಕ್ಯಾಂಪಸ್ ಒಂದು ಅತ್ಯಾಧುನಿಕ ಸೌಲಭ್ಯವಾಗಿದ್ದು, ಬಹು ಉಡಾವಣಾ ವಾಹನಗಳ ವಿನ್ಯಾಸ, ಅಭಿವೃದ್ಧಿ, ಸಂಯೋಜನೆ ಮತ್ತು ಪರೀಕ್ಷೆಗಾಗಿ ಸುಮಾರು 200,000 ಚದರ ಅಡಿ ಕಾರ್ಯಕ್ಷೇತ್ರವನ್ನು ಹೊಂದಿದೆ ಎನ್ನಲಾಗಿದ್ದು, ಇದು ಪ್ರತಿ ತಿಂಗಳು ಒಂದು ಕಕ್ಷೆಯ ರಾಕೆಟ್ ಅನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಸ್ಕೈರೂಟ್​​ನ್ನು ಪವನ್ ಚಂದನ ಮತ್ತು ಭರತ್ ಢಾಕಾ ಸ್ಥಾಪಿಸಿದ್ದು, ಈ ಇಬ್ಬರೂ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಮತ್ತು ಇಸ್ರೋದ ಮಾಜಿ ವಿಜ್ಞಾನಿಗಳು ಉದ್ಯಮಿಗಳಾದರು. ಇದು ಭಾರತದ ಪ್ರಮುಖ ಖಾಸಗಿ ಬಾಹ್ಯಾಕಾಶ ಕಂಪನಿಯಾಗಿದೆ. 2022 ರ ನವೆಂಬರ್​​ನಲ್ಲಿ ಕಂಪನಿಯು ಸಬ್-ಆರ್ಬಿಟಲ್ ರಾಕೆಟ್ ವಿಕ್ರಮ್-ಎಸ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಬಾಹ್ಯಾಕಾಶಕ್ಕೆ ರಾಕೆಟ್​​ನ್ನು ಉಡಾಯಿಸಿದ ಮೊದಲ ಭಾರತೀಯ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ಫಿನಿಟಿ ಕ್ಯಾಂಪಸ್ ಉದ್ಘಾಟನೆ ಮತ್ತು ವಿಕ್ರಮ್-I ಅನಾವರಣವು ಭಾರತದ ಖಾಸಗಿ ಬಾಹ್ಯಾಕಾಶ ವಲಯಕ್ಕೆ ಪ್ರಮುಖ ಉತ್ತೇಜನವನ್ನು ಪ್ರತಿನಿಧಿಸುತ್ತದೆ ಮತ್ತು ಆತ್ಮವಿಶ್ವಾಸ ಮತ್ತು ಸಮರ್ಥ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಭಾರತದ ಸ್ಥಾನವನ್ನು ಬಲಪಡಿಸುವವರ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net