ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ನೆನೆದ ಪ್ರಧಾನಿ ಮೋದಿ, ಭಾರತ ಮತ್ತು ಇಂಡೋನೇಷ್ಯಾ ಕೇವಲ ಭೌಗೋಳಿಕವಾಗಿ ಸಮುದ್ರ ಹಂಚಿಕೊಂಡಿಲ್ಲ, ಬದಲಿಗೆ ಶತಮಾನಗಳ ಹಳೆಯ ಇತಿಹಾಸವನ್ನು ಹಂಚಿಕೊಂಡಿವೆ ಎಂದರು. ನಮ್ಮಿಬ್ಬರ ನಡುವಿನ ಸಂಬಂಧವು ರಾಮಾಯಣ, ಮಹಾಭಾರತ ಮತ್ತು ಪುರಾತನ ನಲಂದಾ ವಿಶ್ವವಿದ್ಯಾಲಯದ ಜ್ಞಾನದ ಪರಂಪರೆಯಿಂದ ಬೆಸೆದುಕೊಂಡಿದೆ. ನಾವು ವಯಾಂಗ್ (ಗೊಂಬೆಯಾಟ), ನೃತ್ಯ ಮತ್ತು ಸಂಗೀತದ ಮೂಲಕ ಮಾತ್ರವಲ್ಲದೆ ಬೊರೊಬುದೂರ್ ಮತ್ತು ಪ್ರಂಬನನ್ನಂತಹ ಭವ್ಯ ಸ್ಮಾರಕಗಳ ಮೂಲಕವೂ ಪರಸ್ಪರ ಬೆಸೆದುಕೊಂಡಿದ್ದೇವೆ ಎಂದರು.