

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ(ನ. 06) ದೇಶದ ಜನತೆಗೆ ದೀಪಾವಳಿ ಶುಭಾಶಯಗಳನ್ನು ಕೋರಿದ್ದು, ಸಂತೋಷ, ಶಾಂತಿ ಮತ್ತು ಸಮೃದ್ಧಿ ಸಿಗಲೆಂದು ಹಾರೈಸಿದ್ದಾರೆ. ಮತ್ತು ಈ ವರ್ಷವೂ ಯೋಧರೊಂದಿಗೆ ದೀಪಾವಳಿ ಆಚರಿಸುವ ತಮ್ಮ ಸಂಪ್ರದಾಯವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ನಮಸ್ಕಾರ! ದೀಪಾವಳಿಯ ಪವಿತ್ರ ಹಬ್ಬ, ಇಡೀ ದೇಶವು ದೀಪಗಳಿಂದ ಬೆಳಗುತ್ತಿದೆ. ಈ ಬೆಳಕಿನ ಹಬ್ಬವು ಕತ್ತಲೆಯ ವಿರುದ್ಧದ ನಮ್ಮ ಸಂಕಲ್ಪದ ಪರಿಚಯವಾಗಿದೆ. ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು. ನಿಮ್ಮ ಈ ಹಬ್ಬ, ನಿಮ್ಮ ಭವಿಷ್ಯದ ಸಮಯವು ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ತುಂಬಿರಲಿ ಎಂದು ಹಾರೈಸಿದ್ದಾರೆ.
ದೀಪಾವಳಿಯನ್ನು ಯೋಧರೊಂದಿಗೆ ಆಚರಿಸುವ ತಮ್ಮ ಸಂಪ್ರದಾಯದ ಬಗ್ಗೆ ಮಾತನಾಡಿರುವ ಅವರು, ಈ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇನೆ. ಮತ್ತು ನಿಮಗೆ ತಿಳಿದಿರುವಂತೆ, ಈ ದಿನವನ್ನು ನಮ್ಮ ಸೈನಿಕರೊಂದಿಗೆ ಕಳೆಯುವುದು ನನಗೆ ಒಂದು ಸಂಪ್ರದಾಯವಾಗಿದೆ, ಈ ವರ್ಷವೂ ನಾನು ಈ ಅಭ್ಯಾಸವನ್ನು ಮುಂದುವರಿಸುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು! ಎಂದು ತಿಳಿಸಿದ್ದಾರೆ (ಏಜೆನ್ಸೀಸ್).