ಸ್ಮೃತಿ ಮಂಧಾನ ಹೊಸ ಇನ್ನಿಂಗ್ಸ್​ಗೆ ಪ್ರಧಾನಿ ಮೋದಿ ಶುಭಾಶಯ | Smriti Mandhana wedding

Smriti Mandhana wedding | ಪ್ರಧಾನಿ ನರೇಂದ್ರ ಮೋದಿಯೊಂದಿಗೆ ವಿಶ್ವಕಪ್ ವಿಜೇತೆ ಸ್ಮೃತಿ ಮಂಧಾನ (ಪಿಟಿಐ)
Smriti Mandhana wedding | ಪ್ರಧಾನಿ ನರೇಂದ್ರ ಮೋದಿಯೊಂದಿಗೆ ವಿಶ್ವಕಪ್ ವಿಜೇತೆ ಸ್ಮೃತಿ ಮಂಧಾನ (ಪಿಟಿಐ)
Published on
ದೆಹಲಿ: ಭಾರತದ ಕ್ರಿಕೆಟ್​ ಆಟಗಾರ್ತಿ, ವಿಶ್ವಕಪ್ ವಿಜೇತೆ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿ ಪತ್ರವನ್ನು ಕಳುಹಿಸಿದ್ದಾರೆ.
ಪತ್ರದಲ್ಲೇನಿದೆ..?
ಇದು ಇಬ್ಬರು ಸಾಧನೆಗೈದ ವ್ಯಕ್ತಿಗಳ ಸಂತೋಷದಾಯಕ ಸಂಗಮ ಎಂದು ಕರೆದಿರುವ ಪ್ರಧಾನಿ ಮೋದಿ, ಎರಡೂ ಕುಟುಂಬಗಳನ್ನು ಅಭಿನಂದಿಸಿದ್ದು, ಹೊಸ ಜೀವನಕ್ಕೆ ಕಾಲಿಡಲಿರುವ ನೂತನ ದಂಪತಿಗಳು, ಸುತ್ತಲಿನವರಿಗೆ ತಮ್ಮ ಪ್ರಯಾಣದಲ್ಲಿ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಆಶಿಸಿದ್ದಾರೆ.
ಹೊಸ ದಂಪತಿಗಳು ಸಂತೋಷದ ಜೀವನ ನಡೆಸಲಿ, ನಿಮ್ಮಿಬ್ಬರ ಮಧ್ಯೆ ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟು ನೆಲೆಸಲಿ, ಸ್ಮೃತಿ ಮತ್ತು ಪಲಾಶ್ ನಂಬಿಕೆಯಲ್ಲಿ ಬೇರೂರಿರುವ ಹಂಚಿಕೆಯ ಜೀವನವನ್ನು ನಿರ್ಮಿಸಲಿ, ಯಾವಾಗಲೂ ಪರಸ್ಪರ ಬೆಂಬಲವಾಗಿ ನಿಲ್ಲಲಿ, ಜವಾಬ್ದಾರಿಗಳನ್ನು ಪ್ರೀತಿಯಿಂದ ಸ್ವೀಕರಿಸಲಿ ಮತ್ತು ಪರಸ್ಪರರ ಸಾಮರ್ಥ್ಯ ಮತ್ತು ಅಪೂರ್ಣತೆಗಳ ಮೂಲಕ ಒಟ್ಟಿಗೆ ಬೆಳೆಯಲಿ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ. ಮಂಧಾನಾ ಅವರ ನಿಶ್ಚಿತಾರ್ಥದ್ದು ಎನ್ನಲಾದ ವಿಡಿಯೋ ವೈರಲ್​ ಆದ ಬಳಿಕ, ಪ್ರಧಾನಿಗಳ ಕಡೆಯಿಂದ ಶುಭಾಶಯಗಳು ಬಂದವು.
ಇತ್ತೀಚಿನ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಎಡಗೈ ಆಟಗಾರ್ತಿ ಮಂಧಾನ ಪ್ರಮುಖ ಪಾತ್ರ ವಹಿಸಿದ್ದು, ಆ ಟೂರ್ನಿಯಲ್ಲಿ ಭಾರತ ತಂಡದ ಪರ ಬ್ಯಾಟಿಂಗ್ ಅತಿ ಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ದಾಖಲೆಯ 434 ರನ್ ಗಳಿಸಿದ್ದು, ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಭಾರತೀಯ ಆಟಗಾರ್ತಿಯೊಬ್ಬರಿಂದ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ಮೃತಿ ಮತ್ತು ಪಲಾಶ್ ವಿವಾಹ ಸಮಾರಂಭ ನವೆಂಬರ್ 23 ರಂದು ವಿವಾಹ ನಡೆಯಲಿದೆ ಎಂದು ವರದಿಯಾಗಿದ್ದು, ಆದರೆ ಇನ್ನೂ ಕುಟುಂಬದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net