ಜನರು, ಗ್ರಹ ಮತ್ತು ಪ್ರಗತಿ: ಭಾರತದ AI ಶೃಂಗಸಭೆಯ ಮೂಲಕ ಜಗತ್ತಿಗೆ ಹೊಸ ದಿಕ್ಕು ತೋರಲಿದ್ದಾರೆ ಮೋದಿ! PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಮಂಟಪದಲ್ಲಿ ಇಂದಿನಿಂದ (ಫೆ.16) ಆರಂಭವಾಗಲಿರುವ ಭಾರತ AI ಇಂಪ್ಯಾಕ್ಟ್ ಶೃಂಗಸಭೆ
  • ಇದು ದೇಶದ ಯುವಕರ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ; ಪ್ರಧಾನಿ ನರೇಂದ್ರ ಮೋದಿ
  • ಪ್ರಪಂಚದಾದ್ಯಂತ ಇರುವ ಜನರು ಭಾರತಕ್ಕೆ ಆಗಮಿಸುತ್ತಿರುವುದು ಹೆಮ್ಮೆಯ ಸಂಗತಿ
ದೆಹಲಿ: ಇಲ್ಲಿನ ಭಾರತ ಮಂಟಪದಲ್ಲಿ ಇಂದಿನಿಂದ (ಫೆ.16) ಆರಂಭವಾಗಲಿರುವ ಭಾರತ AI ಇಂಪ್ಯಾಕ್ಟ್ ಶೃಂಗಸಭೆ ಕುರಿತು ಪ್ರಧಾನಿ ನರೇಂದ್ರ ಮೋದಿ (PM Modi) ಮೆಚ್ಚುಗೆ ವ್ಯಕ್ತಪಡಿಸಿದ್ದು ಇದು ದೇಶದ ಯುವಕರ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿˌ ಜಾಗತಿಕ ಭಾಗವಹಿಸುವಿಕೆಗೆ ಕರೆ ನೀಡಿದ್ದಾರೆ. ಈ ಶೃಂಗಸಭೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ತ್ವರಿತ ಪ್ರಗತಿಯನ್ನು ಜಗತ್ತಿನ ಮುಂದಿಡಲಿದ್ದು ˌ ದೇಶದ ಬೆಳವಣಿಗೆಗೆ ನೆರವಾಗುತ್ತದೆ ಎಂದು ಹೇಳಿದ್ದಾರೆ.
ಭಾರತದ ಎಐ ಇಂಪ್ಯಾಕ್ಟ್ ಶೃಂಗಸಭೆಗಾಗಿ ಪ್ರಪಂಚದಾದ್ಯಂತ ಇರುವ ಜನರು ಭಾರತಕ್ಕೆ ಆಗಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ˌ ಇದು ನಮ್ಮ ದೇಶದ ಯುವಕರ ಸಾಮರ್ಥ್ಯ ಎಂತಹದ್ದು ಎನ್ನುವುದನ್ನು ತೋರಿಸುತ್ತದೆ.
ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಹೆಜ್ಜೆ ಹಾಕುವ ಮೂಲಕ ಜಗತ್ತಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂಬುದಕ್ಕೆ ಈ ರೀತಿಯ ಸಂದರ್ಭಗಳೇ ನೈಜ ಸಾಕ್ಷಿ ಎಂದಿದ್ದಾರೆ.
ಸೋಮವಾರ (ಫೆ.16)ರಿಂದ ಗುರುವಾರ (ಫೆ.19) ವರೆಗೆ ನಡೆಯಲಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು ˌ ಈ ಸಭೆಯಲ್ಲಿ ಸುಮಾರು 600 ಸ್ಟಾರ್ಟ್‌ಅಪ್‌ಗಳು ಮತ್ತು ಸಂಸ್ಥೆಗಳು ಭಾಗವಹಿಸಲಿವೆ. ಆಸ್ಟ್ರೇಲಿಯಾ, ಜಪಾನ್, ರಷ್ಯಾ, ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್‌ಲ್ಯಾಂಡ್ಸ್, ಸ್ವಿಟ್ಜರ್‌ಲ್ಯಾಂಡ್, ಸೆರ್ಬಿಯಾ, ಎಸ್ಟೋನಿಯಾ, ತಜಿಕಿಸ್ತಾನ್ ಮತ್ತು ಆಫ್ರಿಕಾ ಸೇರಿದಂತೆ 13 ದೇಶಗಳು ಎಕ್ಸ್‌ಪೋದಲ್ಲಿ ಪಾಲ್ಗೊಳ್ಳಲಿವೆ.
300 ಕ್ಕೂ ಹೆಚ್ಚು ಪ್ರದರ್ಶನಗಳು , 500 ಕ್ಕೂ ಹೆಚ್ಚು ಅಧಿವೇಶನಗಳು ನಡೆಯಲಿದ್ದು, ಈ ಶೃಂಗಸಭೆಯು ಜನರು, ಗ್ರಹ ಮತ್ತು ಪ್ರಗತಿ ಎಂಬ ಮೂರು ಸೂತ್ರಗಳ ಮೇಲೆ ಆಧಾರಿತವಾಗಿರುವ ಹಿನ್ನಲೆಯಲ್ಲಿ ಜಾಗತಿಕ ನಾಯಕರು ಕೃತಕ ಬುದ್ಧಿಮತ್ತೆಯ ಬಗ್ಗೆ ತಮ್ಮಲ್ಲಿರುವ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಸರ್ಕಾರದ ಮೂಲಗಳ ಮಾಹಿತಿ ಪ್ರಕಾರ, ಎಕ್ಸ್‌ಪೋದಲ್ಲಿ 300 ಕ್ಕೂ ಹೆಚ್ಚು ವಿಶೇಷ ಅಧಿ ಸ್ಥಾಪಿಸಲಾಗಿದ್ದು, ಇವು ಕೃತಕ ಬುದ್ಧಿಮತ್ತೆಯ ವಿವಿಧ ಆಯಾಮಗಳ ಬಗ್ಗೆ ಪ್ರದರ್ಶನ ನೀಡಲಿವೆ.
ಈ ಶೃಂಗಸಭೆಯಲ್ಲಿ, 3,250 ಭಾಷಣಕಾರರು ಮತ್ತು ಸಮಿತಿ ಸದಸ್ಯರು ಎಐ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರೆಜಿಲ್‌ನ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಸುಮಾರು 20 ದೇಶಗಳ ಜಾಗತಿಕ ನಾಯಕರು, ಪ್ರತಿನಿಧಿಗಳು ಮತ್ತು ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net