ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಪ್ರಧಾನಿ ಮೋದಿ ಕೊಡುಗೆ: ಮನೆ ಬಾಗಿಲಲ್ಲೇ ಸಿಗಲಿದೆ ಉಚಿತ ಆನ್‌ಲೈನ್ ಕೋಚಿಂಗ್! PM Modi

PM Modi (ಚಿತ್ರ X)
PM Modi (ಚಿತ್ರ X)
Published on

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ದೇಶದ ಯುವಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (

PM Modi)

ಅವರು ಬೃಹತ್ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರವೇ ಉಚಿತ ಆನ್‌ಲೈನ್ ಕೋಚಿಂಗ್ ಒದಗಿಸಲಿದೆ ಎಂದು ತಿಳಿಸಿದರು.

ಕೋಚಿಂಗ್ ಸೆಂಟರ್‌ಗಳ ಬಗೆಗಿನ ಕಳಕಳಿ

ಖಾಸಗಿ ಕೋಚಿಂಗ್ ಸೆಂಟರ್‌ಗಳ ವೆಚ್ಚವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ವಿಪರೀತ ಆರ್ಥಿಕ ಹೊರೆಯಾಗುತ್ತಿದೆ ಎಂದು ಪ್ರಧಾನಿ ಕಳವಳ ವ್ಯಕ್ತಪಡಿಸಿದರು. ಇಂದಿನ ದಿನಗಳಲ್ಲಿ ಮಕ್ಕಳು ಕೋಚಿಂಗ್ ಸೆಂಟರ್‌ಗಳಿಗೆ ಹೋಗಿಲ್ಲ ಎಂದರೆ ಅವರ ಕುಟುಂಬಗಳಿಗೆ ಕಿಮ್ಮತ್ತಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಇದನ್ನು ತಪ್ಪಿಸಿ, ಕುಟುಂಬಗಳು ಕೋಚಿಂಗ್‌ಗಾಗಿ ಖರ್ಚು ಮಾಡುವ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ.
ಯುವಜನರು ತಮ್ಮ ಮನೆಯಲ್ಲೇ ಇದ್ದು ಅಧ್ಯಯನ ನಡೆಸಲು ಈ ಯೋಜನೆ ನೆರವಾಗಲಿದೆ. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯ ಮತ್ತು ಪ್ರತಿಭಾವಂತ ಶಿಕ್ಷಕರ ಜಾಲವನ್ನು ಬಳಸಿಕೊಂಡು ಈ ಉಚಿತ ಆನ್‌ಲೈನ್ ತರಬೇತಿಯನ್ನು ನೀಡಲಾಗುವುದು ಎಂದು ಅವರು ವಿವರ ನೀಡಿದರು. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶಾದ್ಯಂತ ಪರೀಕ್ಷಾ ಅಕ್ರಮಗಳ ವಿರುದ್ಧ ಯುವಜನರು ನಡೆಸಿದ ಪ್ರತಿಭಟನೆಗಳ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

ರಾಷ್ಟ್ರೀಯ ಜನಗಣತಿಯಲ್ಲಿ ಯುವಕರ ಸಹಕಾರಕ್ಕೆ ಕರೆ

ಇದೇ ವೇಳೆ, ಮುಂಬರುವ ರಾಷ್ಟ್ರೀಯ ಜನಗಣತಿ ಕಾರ್ಯದಲ್ಲಿ "ಪ್ರತಿಯೊಬ್ಬ ಯುವಕನೂ ದಿನಕ್ಕೆ ಒಂದು ಅಥವಾ ಎರಡು ಗಂಟೆಗಳ ಕಾಲ ಜನಗಣತಿ ಪ್ರಕ್ರಿಯೆಯಲ್ಲಿ ನೆರವಾದರೆ, ಅದು ದೇಶದ ಶಕ್ತಿಗೆ ದೊಡ್ಡ ಬಲವಾಗಲಿದೆ. ಪ್ರತಿಯೊಂದು ಮನೆಯಲ್ಲೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಆಶಿಸಿದರು.
ಜನಗಣತಿಯು ಕೇವಲ ಸಂಖ್ಯೆಗಳ ಎಣಿಕೆಯಷ್ಟೇ ಅಲ್ಲ, ಅದು ದೇಶದ ಭವಿಷ್ಯದ ಯೋಜನೆಗಳು ಮತ್ತು ಅಭಿವೃದ್ಧಿ ನೀತಿಗಳನ್ನು ರೂಪಿಸಲು ನೆರವಾಗುವ ಅತ್ಯಂತ ಪ್ರಮುಖ ಮಾಹಿತಿ ಮೂಲವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ನಿಖರವಾದ ಮಾಹಿತಿಯನ್ನು ನೀಡುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ದಿಮಾಗಿ ನಕ್ಸಲರ ಗುರುತಿಸಿ ಪ್ರತ್ಯೇಕಿಸಿ: ಪ್ರಧಾನಿ ಮೋದಿ ಕರೆ

ದೇಶದಲ್ಲಿ ಮಾವೋವಾದಿ ತೀವ್ರವಾದವು ತನ್ನ ಕೊನೆಯ ಉಸಿರೆಳೆಯುತ್ತಿದ್ದು, 'ದಿಮಾಗಿ ನಕ್ಸಲರನ್ನು' (ಬೌದ್ಧಿಕ ನಕ್ಸಲರು) ಗುರುತಿಸಿ ಪ್ರತ್ಯೇಕಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನಾಲ್ಕು ದಶಕಗಳಿಂದ ನಕ್ಸಲಿಸಂ ಯುವಕರ ಭವಿಷ್ಯವನ್ನು ಹಾಳುಮಾಡಿದೆ ಎಂದ ಅವರು, ಈ ಹಿಂಸಾಚಾರದಲ್ಲಿ 3,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ, ಈ ಸಂಖ್ಯೆಯು ಯುದ್ಧದಲ್ಲಿ ಮಡಿದವರಿಗಿಂತಲೂ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

2014ರಲ್ಲಿ ಅಧಿಕಾರಕ್ಕೆ ಬಂದಾಗ ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಪ್ರಮಾಣ ಮಾಡಲಾಗಿತ್ತು ಎಂದ ಪ್ರಧಾನಿ, ಇಂದು ಹಲವು ಪ್ರದೇಶಗಳು ನಕ್ಸಲ್ ಮುಕ್ತಗೊಂಡು ಅಭಿವೃದ್ಧಿ ಕಾಣುತ್ತಿವೆ ಎಂದರು. ಹಿಂದೆ ನಕ್ಸಲ್ ಮನಸ್ಥಿತಿ ಹೊಂದಿದ್ದವರು ಸರ್ಕಾರದ ಉನ್ನತ ಸಮಿತಿಗಳಲ್ಲಿ ಸಲಹೆಗಾರರಾಗಿ ನೀತಿಗಳ ಮೇಲೆ ಪ್ರಭಾವ ಬೀರಿದ್ದರು, ಆದರೆ ಕಳೆದ 10 ವರ್ಷಗಳಲ್ಲಿ ಇಂತಹ ಸಿದ್ಧಾಂತಗಳನ್ನು ನಿರ್ದಾಕ್ಷಿಣ್ಯವಾಗಿ ಮೆಟ್ಟಿಹಾಕಲಾಗಿದೆ ಎಂದು ಮೋದಿ ತಿಳಿಸಿದರು

(

​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net