ಸಂಪುಟ ಸಭೆಯಲ್ಲಿ ಡ್ರಗ್ಸ್​ ಪಿಡುಗಿನ ಬಗ್ಗೆ ಕಳವಳ ವ್ಯಕ್ತಪಡಿಸುವಾಗ ಭಾವುಕರಾದ ಪ್ರಧಾನಿ ಮೋದಿ: ಮಾದಕ ವಸ್ತು ನಿರ್ಮೂಲನೆಗೆ ಕರೆ | PM Modi

ಫಿಲಿಪೈನ್ಸ್‌ನಲ್ಲಿ ನಡೆದ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಭಾಗವಹಿಸಿ ನಿನ್ನೆಯಷ್ಟೇ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ, ಇಂದು(ನ. 18) ನಡೆದ ಕೇಂದ್ರ ಸಚಿವರ ಮಂಡಳಿಯ ಸಭೆಯಲ್ಲಿ ಡ್ರಗ್ಸ್​ ಪಿಡುಗಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುವಾಗ ಭಾವುಕರಾದರು ಎಂದು ವರದಿಯಾಗಿದೆ.
ಸಂಪುಟ ಸಭೆಯಲ್ಲಿ ಡ್ರಗ್ಸ್​ ಪಿಡುಗಿನ ಬಗ್ಗೆ ಕಳವಳ ವ್ಯಕ್ತಪಡಿಸುವಾಗ ಭಾವುಕರಾದ ಪ್ರಧಾನಿ ಮೋದಿ: ಮಾದಕ ವಸ್ತು ನಿರ್ಮೂಲನೆಗೆ ಕರೆ | PM Modi
Published on: 

ನವದೆಹಲಿ: ಫಿಲಿಪೈನ್ಸ್‌ನಲ್ಲಿ ನಡೆದ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಭಾಗವಹಿಸಿ ನಿನ್ನೆಯಷ್ಟೇ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ, ಇಂದು(ನ. 18) ನಡೆದ ಕೇಂದ್ರ ಸಚಿವರ ಮಂಡಳಿಯ ಸಭೆಯಲ್ಲಿ ಡ್ರಗ್ಸ್​ ಪಿಡುಗಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುವಾಗ ಭಾವುಕರಾದರು ಎಂದು ವರದಿಯಾಗಿದೆ.

ಭಾರತ ಮಂಟಪದಲ್ಲಿ ನಡೆದ ಕೇಂದ್ರ ಸಚಿವರ ಮಂಡಳಿಯ ಸುಮಾರು ಮೂರೂವರೆ ಗಂಟೆಗಳ ಸಭೆಯಲ್ಲಿ ದೇಶದ ಯುವಜನರು ಯಾವುದೇ ಕಾರಣಕ್ಕೂ ಮಾದಕವಸ್ತುಗಳ ಜಾಲಕ್ಕೆ ಸಿಲುಕದಂತೆ ಅವರನ್ನು ರಕ್ಷಿಸಬೇಕು ಎಂದು ಹೇಳುವಾಗ ಮೋದಿಯವರು ಭಾವುಕರಾದರು ಎನ್ನಲಾಗಿದೆ.

Also Read
ನದಿಗೆ ಉರುಳಿ ಬಿದ್ದ ಸೇನಾ ವಾಹನ; ಸೇನಾ ಕ್ಯಾಪ್ಟನ್ ಸಾ*, ಮೂವರು ಸಿಬ್ಬಂದಿಗೆ ಗಾಯ | Army vehicle
ಸಂಪುಟ ಸಭೆಯಲ್ಲಿ ಡ್ರಗ್ಸ್​ ಪಿಡುಗಿನ ಬಗ್ಗೆ ಕಳವಳ ವ್ಯಕ್ತಪಡಿಸುವಾಗ ಭಾವುಕರಾದ ಪ್ರಧಾನಿ ಮೋದಿ: ಮಾದಕ ವಸ್ತು ನಿರ್ಮೂಲನೆಗೆ ಕರೆ | PM Modi

ಇದೇ ವೇಳೆ ದೇಶದಲ್ಲಿ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿದೆ. ಅದೇ ರೀತಿ ಮಾದಕ ವಸ್ತುಗಳ ನಿರ್ಮೂಲನೆಯಾಗಬೇಕೆಂದು ಕರೆ ನೀಡಿದ್ದಾರೆ. ಇನ್ನೂ ಮುಂದಿನ ವರ್ಷ ಪಂಜಾಬ್‌ನಲ್ಲಿ ಚುನಾವಣೆ ನಡೆಯಲಿದ್ದು, ಆಮ್ ಆದ್ಮಿ ಪಕ್ಷದ ಸರ್ಕಾರ ಡ್ರಗ್ಸ್​ ಸಮಸ್ಯೆಯನ್ನು ನಿಭಾಯಿಸಿರುವ ರೀತಿ ಬಗ್ಗೆ ವಾದ ವಿವಾದ ನಡೆಯುತ್ತಿರುವ ನಡುವೆ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಇನ್ನೂ ಛತ್ತೀಸ್‌ಗಢದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿದ್ದ 1,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ಬೆಟಾಲಿಯನ್ ಅನ್ನು ಸಿಆರ್‌ಪಿಎಫ್ ಹಿಂತೆಗೆದುಕೊಂಡಿದ್ದು, ಅದನ್ನು ಮಣಿಪುರಕ್ಕೆ ಕಳುಹಿಸಿದೆ ಎನ್ನಲಾಗಿದೆ (ಏಜೆನ್ಸೀಸ್).