PM CARES Fundಗೆ ಮತ್ತಷ್ಟು ಬಲ! ಒಂದೇ ವರ್ಷದಲ್ಲಿ 1,279 ಕೋಟಿ ರೂ. ಏರಿಕೆ... | PM CARES Fund increase
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
‘ಪಿಎಂ ಕೇರ್ಸ್ ಫಂಡ್’ನ ಒಟ್ಟು ನಿಧಿ 8,452 ಕೋಟಿ ರೂ.ಗೆ ಏರಿಕೆ
2023-24ರಲ್ಲಿ 7,173 ಕೋಟಿ ರೂ.ಇದ್ದ ನಿಧಿ, 1,279 ಕೋಟಿ ಹೆಚ್ಚಳ
PM CARES for Children ಯೋಜನೆಯಡಿ ಮಕ್ಕಳಿಗೆ ನೆರವು
PM CARES Fund: ‘ಪಿಎಂ ಕೇರ್ಸ್ ಫಂಡ್’ನ ಒಟ್ಟು ನಿಧಿಯು 2024-25ನೇ ಸಾಲಿನಲ್ಲಿ ದಾಖಲೆಯ ಏರಿಕೆ ಕಂಡಿದ್ದು, 8,452 ಕೋಟಿ ರೂ.ಗೆ ತಲುಪಿದೆ. ಇತ್ತೀಚೆಗೆ ಆಡಿಟ್ ಮಾಡಲಾದ ಹಣಕಾಸು ವಿವರಗಳ ಪ್ರಕಾರ, 2023-24ರಲ್ಲಿ 7,173 ಕೋಟಿ ರೂ. ಇದ್ದ ಫಂಡ್, ಒಂದೇ ವರ್ಷದಲ್ಲಿ 1,279 ಕೋಟಿ ರೂ. ಹೆಚ್ಚಾಗಿದೆ.
‘ಪಿಎಂ ಕೇರ್ಸ್ ಫಂಡ್’ನ ಒಟ್ಟು ಮೊತ್ತದಲ್ಲಿ 6,641 ಕೋಟಿ ರೂ. ಅನ್ನು ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ (FD) ಇರಿಸಲಾಗಿದೆ. ಈ ಹಣದಿಂದ 2024-25ನೇ ಸಾಲಿನಲ್ಲಿ ಸುಮಾರು 475 ಕೋಟಿ ರೂ. ಬಡ್ಡಿ ಆದಾಯ ಬಂದಿದೆ. ಅಂದರೆ, ಹೊಸದಾಗಿ ಯಾವುದೇ ದೇಣಿಗೆ ಬಂದಿಲ್ಲದಿದ್ದರೂ, ಈಗಾಗಲೇ ನಿಧಿಯಲ್ಲಿದ್ದ ಹಣವನ್ನು ಎಫ್ಡಿ ಮಾಡಿ ಆದಾಯ ಗಳಿಸಲಾಗಿದೆ. ಅಗತ್ಯವಿಲ್ಲದ ಹಣವನ್ನು ಮೀಸಲಿಟ್ಟು, ಅದರಿಂದ ಬಡ್ಡಿಯನ್ನೂ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
475 ಕೋಟಿ ರೂ.
ದೇಶೀಯ
ದೇಣಿಗೆ
2024-25ನೇ ಸಾಲಿನಲ್ಲಿ ಪಿಎಂ ಕೇರ್ಸ್ ಫಂಡ್ಗೆ ದೇಶೀಯ ಮೂಲಗಳಿಂದ ಸುಮಾರು 475 ಕೋಟಿ ರೂ. ದೇಣಿಗೆ ಬಂದಿದೆ. ದೇಣಿಗೆಗಳ ಜೊತೆಗೆ ಎಫ್ಡಿಗಳಿಂದ ಬಂದ ಬಡ್ಡಿ ಆದಾಯವೂ ನಿಧಿಯ ಒಟ್ಟು ಸಂಪನ್ಮೂಲ ಹೆಚ್ಚಳಕ್ಕೆ ನೆರವಾಗಿದೆ. ಇತ್ತೀಚಿನ ಅಂಕಿ-ಅಂಶಗಳು, ನಿಧಿಯಲ್ಲಿರುವ ಹಣವನ್ನು ಕೇವಲ ಉಳಿತಾಯ ಖಾತೆಗಳಲ್ಲಿ ಇಡುವ ಬದಲು ಅದರ ದೊಡ್ಡ ಭಾಗವನ್ನು ಫಿಕ್ಸೆಡ್ ಡೆಪಾಸಿಟ್‌ಗಳಿಗೆ ವರ್ಗಾಯಿಸಿರುವುದನ್ನು ತೋರಿಸುತ್ತವೆ.
ತುರ್ತು ಪರಿಸ್ಥಿತಿಗೆ ಹಣ ಮೀಸಲು
ಇನ್ನು, ಈ ಫಂಡ್ ಹೆಚ್ಚಾಗಿರುವುದರಿಂದ, ತುರ್ತು ಪರಿಸ್ಥಿತಿಗಳು ಎದುರಾದಾಗ ಸರ್ಕಾರಕ್ಕೆ ತಕ್ಷಣ ಹಣಕಾಸಿನ ನೆರವು ಒದಗಿಸಲು ದೊಡ್ಡ ಮೊತ್ತದ ಮೀಸಲು ಇದೆ. ಒಟ್ಟು 8,452 ಕೋಟಿ ರೂ. ನಿಧಿ ಹೊಂದಿರುವ ಪಿಎಂ ಕೇರ್ಸ್ ಫಂಡ್ನಲ್ಲಿ 6,641 ಕೋಟಿ ರೂ. ಎಫ್ಡಿ ಇದೆ. ಹೀಗಾಗಿ ಬಳಕೆಯಾಗದ ಹಣದಿಂದ ಬಡ್ಡಿ ಆದಾಯ ಪಡೆಯುತ್ತಲೇ, ಅಗತ್ಯ ಸಂದರ್ಭದಲ್ಲಿ ಬಳಸಿಕೊಳ್ಳಲು ನಿಧಿಯನ್ನು ಕಾಯ್ದಿರಿಸಲಾಗಿದೆ.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಪೋಷಕರು ಅಥವಾ ಕಾನೂನುಬದ್ಧ ಪಾಲಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಆರಂಭಿಸಲಾಗಿರುವ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯಡಿ ಖರ್ಚು ಮುಂದುವರಿದಿದೆ. ಈ ಯೋಜನೆಯಡಿ ಮಕ್ಕಳ ಶಿಕ್ಷಣ, ಆರೋಗ್ಯ ಅಗತ್ಯಗಳಿಗೆ ನೆರವು ನೀಡಲಾಗುತ್ತಿದೆ.ಮತ್ತೊಂದೆಡೆ ಈ ಮಕ್ಕಳ ಕಲ್ಯಾಣ ಯೋಜನೆಯಡಿ ಹಣವನ್ನು ಖರ್ಚು ಮಾಡಲಾಗುತ್ತಿದೆ,(ಏಜೆನ್ಸೀಸ್).