ಈ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಅಡಚಣೆಗಳಿಂದ ಭಾರತವನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಸೂಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಈಗಾಗಲೇ ಉನ್ನತ ಮಟ್ಟದ ಸಚಿವರ ಗುಂಪನ್ನು ರಚಿಸಲಾಗಿದ್ದು, ಕೇಂದ್ರ ಸಚಿವರಾದ ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಮತ್ತು ಹರ್ದೀಪ್ ಸಿಂಗ್ ಪುರಿ ಈ ಸಮಿತಿಯ ಭಾಗವಾಗಿದ್ದಾರೆ. ಪರಿಸ್ಥಿತಿಯ ಕುರಿತು ಸರ್ಕಾರವು ಇಪ್ಪತ್ತನಾಲ್ಕು ಗಂಟೆಯೂ ನಿರಂತರ ನಿಗಾ ಇರಿಸಿದೆ ಎಂದು ರಾಜನಾಥ್ ಸಿಂಗ್ ಇತ್ತೀಚೆಗೆ ತಿಳಿಸಿದ್ದರು. ಅಲ್ಲದೆ, ಪ್ರಸ್ತುತ ಕಚ್ಚಾ ತೈಲ, ಇಂಧನ ಅಥವಾ ಎಲ್‌ಪಿಜಿ ಏನೇ ಇರಲಿ, ನಮ್ಮಲ್ಲಿ ಸಾಕಷ್ಟು ದಾಸ್ತಾನು ಇದೆ. ಸದ್ಯಕ್ಕೆ ಯಾವುದೇ ನಿರ್ದಿಷ್ಟ ಸಮಸ್ಯೆಯಿಲ್ಲ ಎಂದೂ ಹೇಳಿದ್ದರು(ಏಜೆನ್ಸೀಸ್).