ಸದ್ಯದ ಮಾಹಿತಿಯ ಪ್ರಕಾರ, ಯುರೋಪ್‌ನಲ್ಲಿ ಈ ಚಂದಾದಾರಿಕೆಗೆ ತಿಂಗಳಿಗೆ 2.49 ಯುರೋಗಳನ್ನು ನಿಗದಿಪಡಿಸಲಾಗಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸರಿಸುಮಾರು 250 ರೂಪಾಯಿಗಳಾಗುತ್ತವೆ. ಆದರೂ, ಭಾರತೀಯ ಮಾರುಕಟ್ಟೆಗೆ ಈ ಸೇವೆ ಅಧಿಕೃತವಾಗಿ ಬಿಡುಗಡೆಯಾದಾಗ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಟೆಕ್ ಲೋಕದ ತಜ್ಞರ ಪ್ರಕಾರ, ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆ ಇರಲಿದ್ದು, ಬಳಕೆದಾರರಿಗೆ ಆಕರ್ಷಕ ಪ್ಯಾಕೇಜ್ ನೀಡುವ ಸಾಧ್ಯತೆಯಿದೆ.