ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಹರೀಶನ ಹತ್ತಿರ ಒಬ್ಬ ಮಹಿಳಾ ವೈದ್ಯೆ ಹತ್ತಿರ ನಿಂತಿದ್ದು, ಹರೀಶನ ನೆತ್ತಿಯನ್ನು ಸವರುತ್ತಾ, ಎಲ್ಲರ ಹತ್ತಿರ ನೀನು ಕ್ಷಮೆ ಕೇಳು ಹಾಗೆ ಎಲ್ಲರನ್ನು ನೀನು ಕ್ಷಮಿಸು ಎಂದು ಎಂದು ಹೇಳುವುದು ಕೇಳಿಸುತ್ತದೆ. ಹರೀಶ ಸಹ ಏನನ್ನೋ ಮಾತನಾಡಲು ಪ್ರಯತ್ನಿಸುತ್ತಿದ್ದು, ಆದರೆ ಅವನ ದೇಹದ ಸ್ಥಿತಿ ಅವನ ಮಾತು ಇತರರಿಗೆ ಕೇಳದಂತೆ ತಡೆದಿದೆ. ಈ ದೃಶ್ಯವನ್ನು ನೋಡುವ ಪ್ರತಿಯೊಬ್ಬ ವೀಕ್ಷಕ ಸಹ ಕಣ್ಣೀರು ಸುರಿಸುವುದಂತು ಸತ್ಯವಾಗಿದೆ.