ಟಾಫಿಗೆ ಭಾರಿ ಬೇಡಿಕೆ ಬಂದಿದ್ದರೂ ಗ್ರಾಹಕರು ಹೆಚ್ಚಿನ ಹಣ ತೆರುವ ಆತಂಕ ಪಡಬೇಕಾಗಿಲ್ಲ ಎಂದು ಮಯಾಂಕ್ ಶಾ ಸ್ಪಷ್ಟಪಡಿಸಿದ್ದಾರೆ. ಬೇಡಿಕೆ ಎಷ್ಟೇ ಹೆಚ್ಚಾದರೂ ಮೆಲೊಡಿ ಟಾಫಿಯ ಬೆಲೆಯನ್ನು ಏರಿಕೆ ಮಾಡುವ ಯಾವುದೇ ಉದ್ದೇಶ ಕಂಪನಿಗೆ ಇಲ್ಲ ಎಂದಿದ್ದಾರೆ. ಉತ್ಪನ್ನದಲ್ಲಿ ಹೊಸ ಪ್ರಯೋಗಗಳ ಬಗ್ಗೆ ಕೇಳಿದಾಗ, ಮೆಲೊಡಿಯ ಮೂಲವನ್ನು ಹಾಗೇ ಉಳಿಸಿಕೊಳ್ಳಲಾಗುವುದು ಎಂದು ಶಾ ತಿಳಿಸಿದ್ದಾರೆ. ಮೆಲೊಡಿ ಅಂದ್ರೆನೇ ಚಾಕೊಲೇಟಿ. ಇದು ತಲೆಮಾರುಗಳಿಂದ ಪ್ರೀತಿಪಾತ್ರವಾದ ಬ್ರ್ಯಾಂಡ್ ಎನ್ನುತ್ತಾ, ಕಂಪನಿಯ ಐಕಾನಿಕ್ ಲೈನ್ ಆದ ಮೆಲೊಡಿ ಖಾವೋ, ಖುದ್ ಜಾನ್ ಜಾವೋ ಅನ್ನು ನಗುನಗುತ್ತಾ ನೆನಪಿಸಿಕೊಂಡಿದ್ದಾರೆ.