ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಗುರ್ಮನ್ ಸಿಂಗ್, ತಾನು ಕೇವಲ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು, ವಿಡಿಯೋಗಳನ್ನು ವೈರಲ್ ಮಾಡಲು ಹಾಗೂ ಯೂಟ್ಯೂಬ್ ಮತ್ತು ಫೇಸ್‌ಬುಕ್ ಮಾನಿಟೈಸೇಶನ್ ಮೂಲಕ ಭಾರಿ ಪ್ರಮಾಣದ ಹಣ ಗಳಿಸಲು ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಅಂತರ್ಜಾಲದಲ್ಲಿ ಇಂತಹ ವಿಡಿಯೋಗಳಿಗೆ ಹೆಚ್ಚಿನ ವೀವ್ಸ್ ಹಾಗೂ ಎಂಗೇಜ್‌ಮೆಂಟ್ ಸಿಗುತ್ತದೆ ಎಂಬ ಕಾರಣಕ್ಕೆ ಮತ್ತು ತನ್ನ ವಿಕೃತ ಮನಸ್ಸಿನ ಸಂತೋಷಕ್ಕಾಗಿ ಆತ ಮುಗ್ಧ ಮಹಿಳಾ ಸವಾರರನ್ನೇ ಮುಖ್ಯವಾಗಿ ಗುರಿ ಮಾಡುತ್ತಿದ್ದೆ ಎಂದು ಬಾಯಿಬಿಟ್ಟಿರುವುದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ.