EPFO: ಒಂದು ಕಾಲದಲ್ಲಿ ಭವಿಷ್ಯ ನಿಧಿ (PF) ಹಣವನ್ನು ಹಿಂಪಡೆಯುವುದು ಉದ್ಯೋಗಿಗಳಿಗೆ ದೊಡ್ಡ ತಲೆನೋವಾಗಿತ್ತು. ಅರ್ಜಿಗಳನ್ನು ಭರ್ತಿ ಮಾಡುವುದು, ಇಪಿಎಫ್ಒ ಕಚೇರಿಗಳಿಗೆ ಅಲೆದಾಡುವುದು, ಕಡತಗಳ ಪರಿಶೀಲನೆಗಳು ಮತ್ತು ವಾರಗಳವರೆಗೆ ನಮ್ಮ ಹಣಕ್ಕಾಗಿ ಕಾಯಬೇಕಾಗಿತ್ತು. ಕೆಲವೊಮ್ಮೆ ಹಣ ಬರುವುದಕ್ಕೆ ಒಂದು ತಿಂಗಳ ಸಮಯ ಕೂಡ ಹಿಡಿಯುತ್ತಿತ್ತು. ಆದರೆ, ಇನ್ಮುಂದೆ ಇಂತಹ ಪರಿಸ್ಥಿತಿ ಇರುವುದಿಲ್ಲ. ಯಾಕೆಂದರೆ, ಇದು ಡಿಜಿಟಲ್ ಕಾಲ.