ನವದೆಹಲಿ: ಮದುವೆ, ಆಸ್ಪತ್ರೆ ಅಥವಾ ಇನ್ನಿತರ ಎಮರ್ಜೆನ್ಸಿ ಪರಿಸ್ಥಿತಿಯಲ್ಲಿ ತಮಗೆ ಆರ್ಥಿಕ ಸಹಾಯ ಒದಗಿಸುವ ಪಿಎಫ್ ಸೇವಿಂಗ್ಸ್ ಹಣ, ಉದ್ಯೋಗಿಗಳಿಗೆ ಹಣಕಾಸು ಬಿಕ್ಕಿಟ್ಟಿನಿಂದ ಕೊಂಚ ರಿಲೀಫ್ ನೀಡುವುದಂತು ಸತ್ಯ. ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನೀಡಲಾಗುವ ಈ ಪಿಎಫ್ ಮತ್ತು ಪಿಂಚಣಿ ಹಣವು, ತುರ್ತು ಅಥವಾ ಕಷ್ಟಕಾಲದಲ್ಲಿ ಕೈಹಿಡಿಯುವುದು ಅಕ್ಷರಶಃ ಸತ್ಯ. ಆದರೆ, ಇಲ್ಲಿಯವರೆಗೆ ಕೇವಲ ತಮ್ಮ ಪಾಲನ್ನು ಮಾತ್ರ ತೆಗೆದುಕೊಳ್ಳುವ ಅವಕಾಶ ಹೊಂದಿದ್ದ ಉದ್ಯೋಗಿಗಳಿಗೆ ಇದೀಗ ಕೇಂದ್ರ ಸರ್ಕಾರ ಇಪಿಎಫ್ಓ 3.0 ಅನ್ನು ಇದೇ ಏ.01ರಿಂದ ಜಾರಿಗೊಳಿಸುತ್ತಿದೆ.