ವಾಹನ ಸವಾರರಿಗೆ ಮತ್ತೆ ದರ ಏರಿಕೆ ಶಾಕ್​! 5 ದಿನಗಳಲ್ಲಿ 2ನೇ ಬಾರಿ ಪೆಟ್ರೋಲ್​-ಡಿಸೇಲ್​ ಬೆಲೆ ಹೆಚ್ಚಿಸಿದ ಕೇಂದ್ರ

ಇಂಧನ ದರ ಮತ್ತೆ ಏರಿಕೆ
ಇಂಧನ ದರ ಮತ್ತೆ ಏರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಎರಡನೇ ಬಾರಿ ಇಂಧನ ದರ ಏರಿಸಿದ ಕೇಂದ್ರ ಸರ್ಕಾರ
  • ಪೆಟ್ರೋಲ್​-ಡಿಸೇಲ್​ ಬೆಲೆಯಲ್ಲಿ ಲೀಟರ್​ಗೆ 90 ಪೈಸೆ ಹೆಚ್ಚಳ
ನವದೆಹಲಿ:
ಇತ್ತೀಚೆಗಷ್ಟೇ, ದೇಶಾದ್ಯಂತ ಪೆಟ್ರೋಲ್​-ಡಿಸೇಲ್​ ಬೆಲೆಯನ್ನು 3 ರೂ.ಗೆ ಹೆಚ್ಚಿಸಿದ್ದ ಸರ್ಕಾರ, ಇದೀಗ ಎರಡನೇ ಬಾರಿಗೆ ಏರಿಕೆ ಮಾಡುವ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್​ ನೀಡಿದೆ. ಪ್ರತಿ ಲೀಟರ್​ಗೆ 90 ಪೈಸೆ ಏರಿಸಿ ಗ್ರಾಹಕರಿಗೆ ಜೇಬಿಗೆ ಕತ್ತರಿ ಹಾಕಿದೆ.
ಇಂಧನವನ್ನು ಮಿತವಾಗಿ ಬಳಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಲೀಟರ್​ಗೆ 3 ರೂ. ಏರಿಕೆ ಮಾಡಿತ್ತು. ಅಲ್ಲಿಗೆ ಪೆಟ್ರೋಲ್​ ಲೀಟರ್​ಗೆ 103ರಿಂದ 106 ರೂ.ಗೆ ತಲುಪಿತ್ತು. ಆದರೀಗ, ಐದು ದಿನಗಳ ಅಂತರದಲ್ಲಿ ಎರಡನೇ ಬಾರಿಗೆ 0.90 ಪೈಸೆ ಹೆಚ್ಚಳ ಮಾಡುವ ಮೂಲಕ ದೇಶದ ಜನತೆಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ.

ಯಾವ ರಾಜ್ಯಗಳಲ್ಲಿ ಎಷ್ಟಾಗಿದೆ? (ಪ್ರತಿ ಲೀ.)


  • ನವದೆಹಲಿ: ಪೆಟ್ರೋಲ್​- 98.64 ರೂ. ಡೀಸೆಲ್ - 91.58 ರೂ.
  • ಬೆಂಗಳೂರು: 107.12 ರೂ., ಡಿಸೇಲ್ ​- 95.04 ರೂ.
  • ಮುಂಬೈ: 107.59 ರೂ., ಡೀಸೆಲ್ - 94.08 ರೂ.
  • ಕೋಲ್ಕತ: 109.70 ರೂ., ಡೀಸೆಲ್ - 96.07 ರೂ.
  • ಚೆನ್ನೈ: 104.49 ರೂ., ಡೀಸೆಲ್ - 96.11 ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net