ಆಶಾ ಭೋಸ್ಲೆ ಸಾವಿನ ವರದಿ ಬೆನ್ನಲ್ಲೇ ಪಾಕ್ ವಾಹಿನಿಗೆ ನೋಟಿಸ್... ಅಸಲಿ ಕಥೆ ಇಲ್ಲಿದೆ ನೋಡಿ! Pakistan Media

Pakistan Media (ಚಿತ್ರ Instagram)
Pakistan Media (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ಹಿನ್ನಲೆ ಗಾಯಕಿ ಆಶಾ ಭೋಸ್ಲೆ ಅವರ ಸಾವಿನ ಸುದ್ದಿಯನ್ನು ವರದಿ ಮಾಡಿದ ಪಾಕಿಸ್ತಾನ ಸುದ್ದಿ ವಾಹಿನಿ
  • ಭಾರತೀಯ ವಿಷಯಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಪಾಕಿಸ್ತಾನ ಮೂಲದ ಮಾಧ್ಯಮ ಸಂಸ್ಥೆಗೆ ತರಾಟೆ
  • ಆಶಾ ಭೋಸ್ಲೆ ಅವರ ನಿಧನದ ವಾರ್ತೆಯನ್ನು ಪ್ರಸಾರ ಮಾಡುವಾಗ ಭಾರತೀಯ ಹಾಡುಗಳು ಮತ್ತು ಚಲನಚಿತ್ರದ ದೃಶ್ಯ ಅಳವಡಿಕೆ
ಇಸ್ಲಾಮಾಬಾದ್: ಖ್ಯಾತ ಹಿನ್ನಲೆ ಗಾಯಕಿ ಆಶಾ ಭೋಸ್ಲೆ ಅವರ ಸಾವಿನ ಸುದ್ದಿಯನ್ನು ವರದಿ ಮಾಡುವಾಗ ಭಾರತೀಯ ವಿಷಯಗಳನ್ನು ಪ್ರಸಾರ ಮಾಡಿದ್ದಕ್ಕಾಗಿ (Pakistan Media) ಪಾಕಿಸ್ತಾನ ಮೂಲದ ಮಾಧ್ಯಮ ಸಂಸ್ಥೆಯು ಅಲ್ಲಿನ ಪ್ರಮುಖ ಸುದ್ದಿ ವಾಹಿನಿಯೊಂದನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಮೂಲಕ ಸಂಗೀತ ದಿಗ್ಗಜರಿಗೆ ಸಲ್ಲಿಸಿದ ಗೌರವವು ಪಾಕಿಸ್ತಾನದಲ್ಲಿ ವಿವಾದಕ್ಕೆ ಕಾರಣವಾಗಿದೆ.
ವರದಿಯ ಪ್ರಕಾರ, ಆಶಾ ಭೋಸ್ಲೆ ಅವರ ನಿಧನದ ವಾರ್ತೆಯನ್ನು ಪ್ರಸಾರ ಮಾಡುವಾಗ ಭಾರತೀಯ ಹಾಡುಗಳು ಮತ್ತು ಚಲನಚಿತ್ರದ ದೃಶ್ಯಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (PEMRA), ಜಿಯೋ ನ್ಯೂಸ್ ವಾಹಿನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಆದಾಗ್ಯೂ, 2018 ರಿಂದ ಪಾಕಿಸ್ತಾನದಲ್ಲಿ ಭಾರತೀಯ ವಿಷಯಗಳ ಮೇಲಿನ ನಿಷೇಧ ಜಾರಿಯಲ್ಲಿರುವುದರಿಂದ ಈ ಕ್ರಮ ಮಹತ್ವದ್ದಾಗಿದೆ.
ನಿಯಂತ್ರಕರ ಪ್ರಕಾರ, ಈ ಪ್ರಸಾರವು ಭಾರತೀಯ ವಿಷಯಗಳನ್ನು ನಿಷೇಧಿಸಿರುವ ಪಾಕಿಸ್ತಾನದ ಸುಪ್ರೀಂ ಕೋರ್ಟ್​ ತೀರ್ಪನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದಾಗಿ ಕಂಡುಬರುತ್ತದೆ. 

ಪೆಮ್ರಾ (PEMRA) ನಿಯಮಗಳೇನು?

ಆದಾಗ್ಯೂ, ಪೆಮ್ರಾ ನಿಯಮಗಳ ಪ್ರಕಾರ, 2009 ರ ನಿಯಮ 15(1), ಪೆಮ್ರಾ (ದೂರದರ್ಶನ ಪ್ರಸಾರ ಕೇಂದ್ರ ಕಾರ್ಯಾಚರಣೆಗಳು) ನಿಯಂತ್ರಣಗಳು 2012ರ ನಿಯಮ 18 1 (ಜಿ), ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ (ಕಾರ್ಯಕ್ರಮಗಳು ಮತ್ತು ಜಾಹೀರಾತುಗಳು) ನೀತಿ ಸಂಹಿತೆ 2015ರ ಹಲವಾರು ಕಲಮುಗಳ ಅಡಿಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪೆಮ್ರಾ ಉಲ್ಲೇಖಿಸಿದೆ.
ಜಿಯೋ ನ್ಯೂಸ್ ಮಾಲೀಕತ್ವದ ಮೆಸರ್ಸ್ ಇಂಡಿಪೆಂಡೆಂಟ್ ಮೀಡಿಯಾ ಕಾರ್ಪೊರೇಷನ್‌ನ ಸಿಇಒ ಏಪ್ರಿಲ್​ 27 ರಂದು ತನ್ನ ಮುಂದೆ ಹಾಜರಾಗಬೇಕು ಎಂದು ಪ್ರಾಧಿಕಾರವು ತಿಳಿಸಿದ್ದು,   ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದೆಂದರೆ, ಲಿಖಿತ ಪ್ರತಿಕ್ರಿಯೆಯನ್ನು 14 ದಿನಗಳ ಒಳಗೆ ಸಲ್ಲಿಸಬೇಕು ಚಾನಲ್​​ಗೆ ಸೂಚನೆ ನೀಡಿದೆ. 
2023 ರಲ್ಲಿ ತಿದ್ದುಪಡಿ ಮಾಡಲಾದ ಪರ್ಮಾ ಆರ್ಡಿನೆನ್ಸ್, 2002 ರ ನಿಬಂಧನೆಗಳ ಅಡಿಯಲ್ಲಿ ದಂಡಗಳು, ಅಮಾನತು ಅಥವಾ ಚಾನೆಲ್‌ನ ಲೈಸನ್ಸ್​ನ್ನು ರದ್ದುಗೊಳಿಸವುದನ್ನು ಕೂಡಾ ದಂಡದಲ್ಲಿ ಸೇರಿಸಬಹುದು ಎಂದು ಪರ್ಮಾ ಎಚ್ಚರಿಸಿದೆ. 

ಜಿಯೋ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕರ ಪ್ರತಿಕ್ರಿಯೆ

ಜಾರಿಯಾದ ನೋಟಿಸ್‌ಗೆ ಪ್ರತಿಕ್ರಿಯಿಸಿದ ಜಿಯೋ ನ್ಯೂಸ್ ಸಿಇಒ ಅಜರ್ ಅಬ್ಬಾಸ್, ಸಂಪಾದಕೀಯ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದು, ಸುದ್ದಿ ವಾಹಿನಿಗಳಲ್ಲಿ ಕಲಾವಿದರ ಕೃತಿಗಳನ್ನು ಮರುಶೀಲಿಸುವುದು ಮತ್ತು ಅವರ ಜೀವನವನ್ನು ವರದಿ ಮಾಡುವುದು ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ. 
ವಾಸ್ತವವಾಗಿ, ಆಶಾ ಭೋಸ್ಲೆ ಅವರ ನಿಲುವಿನ ಕಲಾವಿದೆಯಾಗಿ, ನಾವು ಅವರ ಕಾಲಾತೀತ ಮತ್ತು ಸ್ಮರಣೀಯ ಹಾಡುಗಳನ್ನು ವಾಹಿನಿಯಲ್ಲಿ ಹಂಚಿಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಹಂಚಿಕೊಳ್ಳಬೇಕಿತ್ತು. ಆದರೂ, ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಕ, ಪರ್ಮಾ ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಆಯ್ಕೆ ಮಾಡಿಕೊಂಡಿದೆ ಎಂದು ತಮ್ಮ ಅಧೀಕೃತ ಎಕ್ಸ್​ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ. 
ಆದಾಗ್ಯೂ, ಜ್ಞಾನದಂತೆಯೇ ಕಲೆಯೂ ಮಾನವೀಯತೆಯ ಹಂಚಿಕೆಯ ಪರಂಪರೆಯಾಗಿದೆ ಮತ್ತು ಅದು ಗಡಿಗಳಿಂದ ಸೀಮಿತವಾಗಿರಬಾರದು. ಆಶಾ ಭೋಸ್ಲೆ ಸ್ವತಃ ಪಾಕಿಸ್ತಾನದ ಪ್ರಸಿದ್ಧ ಗಾಯಕಿ ನೂರ್ ಜಹಾನ್ ಮೆಚ್ಚಿಕೊಂಡಿದ್ದು, ಅವರನ್ನು ಅಕ್ಕ ಎಂದು ಕರೆಯುತ್ತಿದ್ದರು. ಅವರು ನುಸ್ರತ್ ಫತೇ ಅಲಿ ಖಾನ್ ಅವರೊಂದಿಗೆ ಸಹಕರಿಸಿದ್ದು, ನಾಸಿರ್ ಕಜ್ಮಿಯಂತಹ ಶ್ರೇಷ್ಠ ಉರ್ದು ಕವಿಗಳ ಕಾವ್ಯಕ್ಕೆ ಜೀವ ತುಂಬಿದ್ದರು ಎಂದು ಅಬ್ಬಾಸ್ ತಿಳಿಸಿದ್ದಾರೆ.

ಪಂಚಭೂತಗಳಲ್ಲಿ ಲೀನರಾದ ಆಶಾ!  

ಶಾ ಭೋಸ್ಲೆ ಅವರ ಅಂತ್ಯಕ್ರಿಯೆಯು ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಆದಾಗ್ಯೂ, ಸಾವಿರಾರು ಅಭಿಮಾನಿಗಳು, ಚಿತ್ರರಂಗದ ದಿಗ್ಗಜರು ಹಾಗೂ ರಾಜಕೀಯ ನಾಯಕರ ಸಮ್ಮುಖದಲ್ಲಿ ಆಶಾ ತೈ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.

ಗಣ್ಯರಿಂದ ಅಂತಿಮ ನಮನ

ಆಶಾ ಭೋಂಸ್ಲೆ ಅವರ ಅಂತಿಮ ದರ್ಶನ ಪಡೆಯಲು ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ತಂಡೋಪತಂಡವಾಗಿ ಆಗಮಿಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸುನೇತ್ರಾ ಪವಾರ್ ಅಂತಿಮ ನಮನ ಸಲ್ಲಿಸಿದರು. ಬಾಲಿವುಡ್ ನಟರಾದ ಅಮೀರ್ ಖಾನ್, ವಿಕ್ಕಿ ಕೌಶಲ್, ಸಂಗೀತ ನಿರ್ದೇಶಕ ಅನು ಮಲಿಕ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಣ್ಣೀರು ಹಾಕುತ್ತಾ ತಮ್ಮ ಪ್ರೀತಿಯ ಗಾಯಕಿಗೆ ವಿದಾಯ ಹೇಳಿದರು (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net