ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಭರವಸೆಗಳನ್ನು ಪ್ರಸ್ತಾಪಿಸಿ ನೇರ ಪ್ರಶ್ನೆ ಎಸೆದಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸುವುದಿಲ್ಲ ಹಾಗೂ ಬಂಧಿತರನ್ನು ಬಿಡುಗಡೆ ಮಾಡಲಾಗುವುದು ಎಂಬ ನಿಮ್ಮ ಭರವಸೆ ಎಲ್ಲಿ ಹೋಯಿತು ಮೋದಿಯವರೇ? ಭರವಸೆ ಈಡೇರಿಸುವ ಬದಲು ವಿದ್ಯಾರ್ಥಿಗಳ ಮೇಲೆ ಕ್ರೂರ ದಾಳಿ ಮತ್ತು ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಜುಲೈ 20 ರಂದು ದೆಹಲಿಯಲ್ಲಿ ನಡೆದ ಜಂತರ್ ಮಂತರ್ ಸಂಸತ್ ಚಲೋ ಪ್ರತಿಭಟನೆಯಲ್ಲಿ ಪೆಲೆಟ್ ಗನ್‌ಗಳನ್ನು ಬಳಸಿದರೆ, ಬಿಹಾರದಲ್ಲಿ ಎಕೆ-47 ಬಳಸಿ ಗುಂಡು ಹಾರಿಸಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಅಥವಾ ದೆಹಲಿ ಹೀಗೆ ಎಲ್ಲೇ ನೋಡಿದರೂ ಸರ್ಕಾರದ ಈ ದಬ್ಬಾಳಿಕೆಯ ಶೈಲಿ ಒಂದೇ ರೀತಿಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.