ಈ ಹಾಸ್ಯ ಪ್ರಸಂಗಗಳು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾದಾಗ, ಸುಪ್ರೀಂ ಕೋರ್ಟ್ ಸ್ವತಃ ಮಧ್ಯಪ್ರವೇಶಿಸಿ ಕಾಮಿಡಿಯನ್‌ಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಅಲ್ಲದೆ, ಅವರವರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬಹಿರಂಗ ಕ್ಷಮಾಯಾಚನೆ ಪ್ರಕಟಿಸುವಂತೆ ನಿರ್ದೇಶನ ನೀಡಿತ್ತು. ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವಿಕಲಚೇತನರನ್ನು ನಿಂದಿಸುವುದರ ವಿರುದ್ಧ ಕಠಿಣ ಕಾನೂನು ಚೌಕಟ್ಟಿನ ಅಗತ್ಯವನ್ನು ಪ್ರತಿಪಾದಿಸಿದ್ದರು. ಎಸ್ಸಿ/ಎಸ್ಟಿ ಕಾಯ್ದೆಯ ಮಾದರಿಯಲ್ಲೇ, ವಿಕಲಚೇತನರನ್ನು ಅವಮಾನಿಸುವ ಮತ್ತು ಕೆಟ್ಟದಾಗಿ ಹಾಸ್ಯ ಮಾಡುವವರ ವಿರುದ್ಧ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ಶಾಸನಬದ್ಧ ಕಾನೂನು ತರಲು ಸಂಸತ್ತು ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದರು. ಬಳಿಕ, 2025 ರ ಅಕ್ಟೋಬರ್‌ನಲ್ಲಿ ಸಮಯ್ ರೈನಾ ಹಾಗೂ ಅವರ ಸಹ ಕಾಮಿಡಿಯನ್‌ಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿ ಈ ವಿವಾದದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು(ಏಜೆನ್ಸೀಸ್).