ಈ ಸಂದರ್ಭದಲ್ಲಿ ಪವನ್ ಖೇರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಂಗಳವಾರ ಗುವಾಹಟಿ ಹೈ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹೇಳಿ ಅಲ್ಲಿಯವರೆಗೆ ಖೇರಾ ಅವರಿಗೆ ರಕ್ಷಣೆ ಕೋರಿದರು. ಆದರೆ, ಕೋರ್ಟ್ ನಿರಾಕರಿಸಿತು. ಈ ವೇಳೆ ಅವರು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಂಗಳವಾರದವರೆಗೆ ನ್ಯಾಯಾಲಯ ನನಗೆ(ಖೇರಾ) ರಕ್ಷಣೆ ನೀಡಲು ಸಾಧ್ಯವಿಲ್ಲವೇ? ನಾನೇನು(ಖೇರಾ) ಭಯೋತ್ಪಾದಕನೇ?" ಎಂದು ಅವರು ಪ್ರಶ್ನಿಸಿದರು(ಏಜೆನ್ಸೀಸ್)