ರಷ್ಯಾದ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲಿದೆ ಪತಂಜಲಿ : ಬಾಬಾ ರಾಮದೇವ್​ Pantanjali

Patanjali
Patanjali
Published on

ಪ್ರಮುಖ ಮುಖ್ಯಾಂಶಗಳು

  • ರಷ್ಯಾ ಮಾರುಕಟ್ಟೆಗೆ ಪತಂಜಲಿ ಪಾದಾರ್ಪಣೆ
  • ಭಾರತದ ಆಧ್ಯಾತ್ಮಿಕ ಜ್ಞಾನ, ಸಂಸ್ಕೃತಿ, ಯೋಗ, ಆಯುರ್ವೇದ ಜ್ಞಾನ ಹಂಚಿಕೆ
Patanjali : ಭಾರತದ ಖ್ಯಾತ ಆಯುರ್ವೇದಿಕ್ ಕಂಪನಿ ಪತಂಜಲಿ (Pantanjali) ಉತ್ಪನ್ನಗಳು ಮುಂದಿನ ದಿನಗಳಲ್ಲಿ ರಷ್ಯಾದ ಮಾರುಕಟ್ಟೆಯಲ್ಲಿ ಪ್ರವೇಶ ಮಾಡಲಿದೆ ಎಂದು ಕಂಪನಿ ಸ್ಥಾಪಕ ಸದಸ್ಯ ಬಾಬಾ ರಾಮದೇವ್​ ತಿಳಿಸಿದ್ದಾರೆ.
ಪತಂಜಲಿ ಗ್ರೂಪ್ ಪರವಾಗಿ ರಾಮ್‌ದೇವ್ ಮತ್ತು ಇಂಡೋ-ರಷ್ಯಾ ಬಿಸಿನೆಸ್ ಕೌನ್ಸಿಲ್‌ನ ಅಧ್ಯಕ್ಷ ಮತ್ತು ರಷ್ಯಾದ ವಾಣಿಜ್ಯ ಸಚಿವ ಸೆರ್ಗೆಯ್ ಚೆರೆಮಿನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಬಾಬಾ ರಾಮದೇವ್,​ ಈ ಒಪ್ಪಂದದ ಪ್ರಮುಖ ಉದ್ದೇಶ ರಷ್ಯಾದಲ್ಲಿ ಪತಂಜಲಿಯ ಕ್ಷೇಮ ಸೇವೆಗಳನ್ನು ವಿಸ್ತರಿಸುವುದಾಗಿದೆ. ಹಾಗೆಯೇ ಭಾರತದ ಆಧ್ಯಾತ್ಮಿಕ ಜ್ಞಾನ, ಸಂಸ್ಕೃತಿ, ಯೋಗ, ಆಯುರ್ವೇದ ಮತ್ತು ಅಮೂಲ್ಯ ಪರಂಪರೆಯನ್ನು ರಷ್ಯಾದೊಂದಿಗೆ ಹಂಚಿಕೊಳ್ಳುವುದಾಗಿದೆ ಎಂದರು.
ಭಾರತದ ಪುರಾತನ ಆಯುರ್ವೇದದ ಮೂಲಕ ವಿದೇಶಿ ನೆಲಗಳಲ್ಲಿ ಆರೋಗ್ಯ ಮತ್ತು ಉತ್ತಮ ಜೀವನಶೈಲಿಯ ಅರಿವನ್ನು ಮೂಡಿಸುವುದು ನಮ್ಮ ಕಂಪನಿಯ ಉದ್ದೇಶವಾಗಿದ್ದು, ಇದು ರಷ್ಯಾ ದೇಶದ ಮೂಲಕ ಪ್ರಾರಂಭವಾಗಲಿದೆ ಎಂದು ಹೇಳಿದರು.
ರಷ್ಯಾದ ವಾಣಿಜ್ಯ ಸಚಿವ ಸೆರ್ಗೆಯ್ ಚೆರೆಮಿನ್ , ನಮಗೆ ಭಾರತದ ಯೋಗ, ಆಹಾರ ಪದ್ಧತಿ ಮತ್ತು ಜೀವನಕ್ರಮದ ಕುರಿತು ತಿಳಿದೊಕೊಳ್ಳುವುದು ಅಚಶ್ಯಕವಾಗದೆ. ಇದರ ಮೂಲಕ ನಮ್ಮ ದೇಶದ ಜನರನ್ನು ರೋಗಮುಕ್ತರಾಗಿ ಮಾಡಿ ಅವರ ಜೀವನಕ್ರಮವನ್ನು ಸುಧಾರಿಸುವ ಉದ್ದೇಶಕ್ಕಾಗಿ ನಾವು ಪತಂಜಲಿ ಗ್ರೂಪ್​ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.

ಪತಂಜಲಿ ಗ್ರೂಪ್​

ಪತಂಜಲಿ ಗ್ರೂಪ್​ (Patanjali Group) ನ್ನು ಭಾರತದಲ್ಲಿ ಯೋಗಗುರು ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದಲ್ಲಿ ಸ್ಥಾಪನೆಯಾಗಿದ್ದು, ಮೂಲತಃ ಪತಂಜಲಿ ಆಯುರ್ವೇದ್, ಪತಂಜಲಿ ಫುಡ್ಸ್, ಮತ್ತು ಪತಂಜಲಿ ಯೋಗಪೀಠಗಳ ಮೂಲಕ ಆಯುರ್ವೇದ, ನೈಸರ್ಗಿಕ ಉತ್ಪನ್ನಗಳು, ಆರೋಗ್ಯ ಸಂರಕ್ಷಣೆ ಮತ್ತು ಯೋಗ ಪ್ರಚಾರದಲ್ಲಿ ಹೆಸರುವಾಸಿಯಾಗಿದೆ. ಆರೋಗ್ಯಕರ, ಸ್ವದೇಶೀ ಮತ್ತು ಸಸ್ಯಾಧಾರಿತ ಉತ್ಪನ್ನಗಳನ್ನು ತಯಾರಿಸುವುದು ಈ ಕಂಪನಿಯ ಉದ್ದೇಶವಾಗಿದ್ದು, ಆಹಾರ, ಸೌಂದರ್ಯವರ್ಧಕ, ಔಷಧಿ, ಗೃಹೋಪಯೋಗಿ ಸಾಮಗ್ರಿಗಳು ಸೇರಿದಂತೆ ನೂರಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತದೆ. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net