ನನ್ನ ತಂದೆ ಭಾಷಣ ಮಾಡುವುದನ್ನು ಮತ್ತು ವೇದಿಕೆಯ ಮೇಲೆ ನಿಂತು ಮಾತನಾಡುವುದನ್ನು ನಾನು ನೋಡಿದ್ದೇನೆ. ನನಗೆ ಶೂಟಿಂಗ್ ಟೈಮ್ನಲ್ಲಿ ಎರಡು ಸಾಲಿನ ಸಂಭಾಷಣೆ ನೀಡುತ್ತಿದ್ದರು. ಆದರೆ, ನಾನು ಎರಡು ಪುಟಗಳ ಕಾಲ ಮಾತನಾಡುತ್ತಿದ್ದೆ. ನಿರ್ಮಾಪಕರು 'ನೀವು ಅಷ್ಟೊಂದು ಹೇಳಬೇಕಾಗಿಲ್ಲ' ಎಂದು ಹೇಳುತ್ತಿದ್ದರು. ನಾನು ನನ್ನ ತಂದೆ ಆಶು ಮಾತನಾಡುವುದನ್ನು ನೋಡಿ ಬೆಳೆದಿದ್ದೇನೆ, ಆದ್ದರಿಂದ ಸಂಭಾಷಣೆಗಳನ್ನು ಸುಧಾರಿಸಬಹುದು ಮತ್ತು ಅದನ್ನು ಹೇಳಬಹುದು ಎಂದು ನಾನು ಭಾವಿಸಿದೆ. ಆದರೆ, ಅದು ನನ್ನಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಸಿನಿಮಾ ರಂಗಕ್ಕೆ ಕೂಡಲೇ ಗುಡ್ ಬೈ ಹೇಳಿದೆ ಎಂದಿದ್ದಾರೆ.