Indian Railway food: ಭಾರತೀಯ ರೈಲ್ವೆಯಲ್ಲಿ ಸರಬರಾಜು ಮಾಡಲಾಗುವ ಆಹಾರದ ಗುಣಮಟ್ಟದ ಕುರಿತು ಪದೇ ಪದೇ ದೂರುಗಳು ಕೇಳಿಬರುತ್ತಲೇ ಇರುತ್ತವೆ. ಈ ನಡುವೆ, ಪ್ರಯಾಣಿಕನೊಬ್ಬ ತಾನು ಆರ್ಡರ್ ಮಾಡಿದ್ದ 'ಎಗ್ ಬಿರಿಯಾನಿ'ಯಲ್ಲಿ ಹುಳ ಪತ್ತೆಯಾಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ (X) ಹಂಚಿಕೊಂಡಿದ್ದು, ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ರೈಲ್ವೆ ಆಹಾರದ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.