ವಾಂತಿ ಆಗಿದ್ದೇ ತಡ ಎಮರ್ಜೆನ್ಸಿ ಡೋರ್​ನಿಂದ ಜಿಗಿದ ವ್ಯಕ್ತಿ! ಮುಂದೇನಾಯ್ತು? ಇಲ್ಲಿದೆ ನೋಡಿ ವರದಿ

ಏರ್ ಅರೇಬಿಯಾ ವಿಮಾನ
ಏರ್ ಅರೇಬಿಯಾ ವಿಮಾನ
Published on

ಪ್ರಮುಖ ಮುಖ್ಯಾಂಶಗಳು

  • ಏರ್​ ಅರೇಬಿಯಾ ವಿಮಾನದ ಎಮರ್ಜೆನ್ಸಿ ಡೋರ್​ನಿಂದ ಜಿಗಿದ ವ್ಯಕ್ತಿ
  • ರನ್​ವೇಯಲ್ಲಿದ್ದ ವಿಮಾನದಿಂದ ಹೊರಗೆ ಹಾರಿದ ಪ್ರಯಾಣಿಕ ಪ್ರಾಣಪಾಯದಿಂದ ಪಾರು
ಚೆನ್ನೈ: ಇಂದು (ಮೇ.03) ಬೆಳ್ಳಂಬೆಳಗ್ಗೆ ಶಾರ್ಜಾದಿಂದ ಚೆನ್ನೈಗೆ ಬಂದಿಳಿದ ಏರ್ ಅರೇಬಿಯಾ ವಿಮಾನದಲ್ಲಿ ಭಯಾನಕ ಘಟನೆಯೊಂದು ಸಂಭವಿಸಿದ್ದು, ಕೆಲ ನಿಮಿಷ ಪ್ರಯಾಣಿಕರ ಎದೆ ಝಲ್​ ಎಂದಿತು.
ಆಗ ತಾನೇ ಚೆನ್ನೈ ಏರ್​ಪೋರ್ಟ್​ನ ರನ್​ವೇಗೆ ಬಂದಿಳಿದ ಏರ್ ಅರೇಬಿಯಾ ವಿಮಾನದಲ್ಲಿ ವ್ಯಕ್ತಿಯೊಬ್ಬರು ಎರಡು ಬಾರಿ ವಾಂತಿ ಮಾಡಿಕೊಂಡಿದ್ದರು. ತೀರ ಸುಸ್ತಾಗಿದ್ದ ಅವರು, ಇನ್ನೇನು ವಿಮಾನ ಸಂಪೂರ್ಣವಾಗಿ ಲ್ಯಾಂಡ್​ ಆಗಬೇಕು ಎನ್ನುವಷ್ಟರಲ್ಲಿ ಎಮರ್ಜೆನ್ಸಿ ಡೋರ್​ನಿಂದ ಹೊರಗೆ ಜಿಗಿದ ಘಟನೆ ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತು.
ಏರ್​ಪೋರ್ಟ್​ ಅಧಿಕಾರಿಗಳು ಹಂಚಿಕೊಂಡ ಮಾಹಿತಿ ಪ್ರಕಾರ, ಈ ಘಟನೆ ವಿಮಾನ ರನ್​ವೇಗೆ ಆಗಮಿಸಿ, ಇನ್ನೇನು ನಿಲ್ಲಬೇಕು ಎನ್ನುವ ಸಮಯದಲ್ಲಿ ನಡೆದಿದೆ. ಹೀಗಾಗಿ, ಅದೃಷ್ಟವಶಾತ್​ ವಿಮಾನದಿಂದ ಕೆಳಗೆ ಜಿಗಿದ ವ್ಯಕ್ತಿಗೆ ಪ್ರಾಣಹಾನಿ ಸಂಭವಿಸಿಲ್ಲ. ಮತ್ತು ವಿಮಾನಕ್ಕೂ ಯಾವುದೇ ಡ್ಯಾಮೇಜ್​ ಕೂಡ ಆಗಿಲ್ಲ ಎಂದು ತಿಳಿಸಲಾಗಿದೆ.
ಪ್ರಾಥಮಿಕ ವರದಿ ಪ್ರಕಾರ, ಅದಾಗಲೇ ವಿಮಾನ ರನ್​ವೇ ದಾಟಿ, ಲ್ಯಾಂಡಿಂಗ್​ಗಾಗಿ ಬಹಳ ನಿಧಾನವಾಗಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ, ಮೊದಲೇ ವಾಂತಿ ಮಾಡಿ ಸುಸ್ತಾಗಿದ್ದ ಪ್ರಯಾಣಿಕ, ಯಾವ ಕಾರಣಕ್ಕೆ ಎಮರ್ಜೆನ್ಸಿ ಡೋರ್​ನಿಂದ ಜಿಗಿದರು ಎಂಬ ಕಾರಣ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net