ಲೋಕಸಭೆ-ರಾಜ್ಯಸಭೆ ಕಲಾಪ ಮುಂದೂಡಿ 10 ದಿನ ಕಳೆದ್ರೂ, ಸಂಸತ್ ಅಧಿವೇಶನ ಮುಂದೂಡಲ್ಪಟ್ಟಿಲ್ಲ! ಹಲವು ಊಹಾಪೋಹ | Parliament session

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನದ(Parliament session) ಉಭಯ ಸದನಗಳನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿ 10 ದಿನಗಳನ್ನು ಕಳೆದಿದ್ರೂ, ಸಂಸತ್​​ ಅಧಿವೇಶನವನ್ನು ಮುಂದೂಡದಿರುವುದು ಕೇಂದ್ರ ಸರ್ಕಾರ ವಿಶೇಷ ಅಧಿವೇಶನವನ್ನು ಕರೆಯಬಹುದು ಎಂಬ ಊಹಾಪೋಹಗಳನ್ನು ಹುಟ್ಟು ಹಾಕಿದೆ.
ಆಗಸ್ಟ್ 13ರಂದು ಲೋಕಸಭೆ ಮತ್ತು ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಬಳಿಕ ಸಾಮಾನ್ಯವಾಗಿ ಅಧಿವೇಶನವನ್ನು ಕೆಲವೇ ದಿನಗಳಲ್ಲಿ ಮುಂದೂಡಲಾಗುತ್ತದೆ, ಆದರೆ ಭಾನುವಾರ(ಆ. 23) ಬೆಳಿಗ್ಗೆಯವರೆಗೆ ಯಾವುದೇ ಅಧಿಸೂಚನೆಯನ್ನು ಹೊರಡಿಸಲಾಗಿಲ್ಲ ಎನ್ನಲಾಗಿದೆ.
ಸಂವಿಧಾನದ ಅಡಿಯಲ್ಲಿ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಸಂಸತ್ತನ್ನು ಕರೆದು ಮುಂದೂಡುತ್ತಾರೆ. ಉದಾಹರಣೆಗೆ, ಬಜೆಟ್ ಅಧಿವೇಶನವು ಏಪ್ರಿಲ್ 18ರಂದು ಕೊನೆಗೊಂಡಿತು ಮತ್ತು ಎರಡು ದಿನಗಳ ನಂತರ ಮುಂದೂಡಲಾಯಿತು. ಆದರೆ ಈ ಬಾರಿ ಸಂಸತ್ ಮುಂದೂಡುವ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆಯಾಗಿಲ್ಲ.
ಇದು 2029ರ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಜಾರಿಗೆ ತರಲು ಇಚ್ಚಿಸುತ್ತಿರುವ ಡಿಲಿಮಿಟೇಷನ್ ಮತ್ತು ಮಹಿಳಾ ಮೀಸಲಾತಿ ಜಾರಿಗೆ ತರುವ ಸಂವಿಧಾನ ತಿದ್ದಪಡಿಗಾಗಿ ವಿಶೇಷ ಅಧಿವೇಶನವನ್ನು ಕರೆಯುವ ಊಹಾಪೋಹಗಳಿಗೆ ಕಾರಣವಾಗಿದೆ.
ಏತನ್ಮಧ್ಯೆ, ಇಂದು(ಆ. 23) ಅಧಿವೇಶನವನ್ನು ಮುಂದೂಡುವ ವಿಳಂಬವನ್ನು ಪ್ರಶ್ನಿಸಿರುವ ಕಾಂಗ್ರೆಸ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶೇಷ ಅಧಿವೇಶನದಲ್ಲಿ ಸೀಮಾ ನಿರ್ಣಯ-ಸಂಬಂಧಿತ ಮಸೂದೆಯನ್ನು ಅಂಗೀಕರಿಸಲು ಅಗತ್ಯವಿರುವ ಸಂಖ್ಯೆಗಳನ್ನು ಇನ್ನೂ ಹುಡುಕುತ್ತಿದ್ದಾರೆ ಎಂದು ಕೇಳಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಿಕೆ ಮತ್ತು ಮುಂದೂಡಿಕೆಯ ನಡುವಿನ ಅಂತರವು ಸಾಮಾನ್ಯವಾಗಿ ಎರಡರಿಂದ ನಾಲ್ಕು ದಿನಗಳು. ಒಂದು ವೇಳೆ ಎರಡೂ ಒಂದೇ ದಿನದಲ್ಲಿ ಸಂಭವಿಸಿದ ನಿದರ್ಶನಗಳೂ ಇವೆ. ಈ ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಹತ್ತು ದಿನಗಳು ಕಳೆದಿವೆ. ಆದರೆ ಇನ್ನೂ ಮುಂದೂಡಿಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net