"ಶೆಫಾಲಿ ಜರಿವಾಲಾ ಮೇಲೆ ಮಾಟಮಂತ್ರ ಮಾಡಲಾಗಿತ್ತು" ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತಿ ಪರಾಗ್.. Shefali Jariwala

Shefali Jariwala
Shefali Jariwala
Published on
ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಡೆಲ್​ ಶೆಫಾಲಿ ಜರಿವಾಲಾ ( Shefali Jariwala ) ಅವರು 2025ರ ಜೂನ್ 27ರಂದು ತಮ್ಮ 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ತಿಂಗಳುಗಳ ನಂತರ ಪತಿ ಪರಾಗ್ ತ್ಯಾಗಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಜೂನ್ 27 ರಂದು ಶೆಫಾಲಿ ನಿಧನರಾದರು. ಊಟದ ನಂತರ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ಇದರಿಂದಾಗಿ, ಅವರ ಪತಿ ಪರಾಗ್ ತ್ಯಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪ್ರಾಥಮಿಕ ಮಾಹಿತಿಯೆಂದರೆ ಶೆಫಾಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪರಾಗ್ ತ್ಯಾಗಿ ಅವರು ಪರಾಸ್ ಛಾಬ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ, ಶೆಫಾಲಿ ಸಾವಿನ ಹಿಂದೆ "ಕಪ್ಪು ಜಾದೂ" (Black Magic) ಅಥವಾ ಮಾಟಮಂತ್ರದ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
"ಶೆಫಾಲಿ ಮೇಲೆ ಎರಡು ಬಾರಿ ಮಾಟಮಂತ್ರ ಮಾಡಲಾಗಿತ್ತು ಎಂದು ನನಗೆ ಅನಿಸಿದೆ. ಆಕೆಯ ಸುತ್ತ ಏನೋ ಒಂದು ನಕಾರಾತ್ಮಕ ಶಕ್ತಿ ಇರುವುದನ್ನು ನಾನು ಎರಡು ಬಾರಿ ಸ್ಪಷ್ಟವಾಗಿ ಅನುಭವಿಸಿದ್ದೆ" ಎಂದು ಪರಾಗ್ ಹೇಳಿದ್ದಾರೆ.
ಸಂದರ್ಶನದಲ್ಲಿ ಪರಾಸ್ ಛಾಬ್ರಾ ಅವರು ಮಾಟಮಂತ್ರವಾದಾಗ ಕಾಣಿಸಿಕೊಳ್ಳುವ ಆತಂಕ (Anxiety), ನಿದ್ರಾಹೀನತೆ ಮತ್ತು ಕಣ್ಣಿನ ಸುತ್ತ ಕಪ್ಪು ವರ್ತುಲಗಳಂತಹ ಲಕ್ಷಣಗಳ ಬಗ್ಗೆ ಪ್ರಸ್ತಾಪಿಸಿದಾಗ, ಶೆಫಾಲಿ ಅವರಲ್ಲೂ ಇಂತಹ ಕೆಲವು ಬದಲಾವಣೆಗಳು ಕಂಡುಬಂದಿದ್ದವು ಎಂದು ಪರಾಗ್ ಸೂಚ್ಯವಾಗಿ ತಿಳಿಸಿದ್ದಾರೆ.
ವೈದ್ಯಕೀಯ ವರದಿಗಳ ಪ್ರಕಾರ ಶೆಫಾಲಿ ಅವರು ಹೃದಯಸ್ತಂಭನದಿಂದ (Cardiac Arrest) ಮೃತಪಟ್ಟಿದ್ದರು. ಆದರೆ ಪರಾಗ್ ಮಾತ್ರ ಇದು ವ್ಯವಸ್ಥಿತವಾದ ಸಂಚು ಅಥವಾ ಮಾಟಮಂತ್ರದ ಫಲ ಇದ್ದಾಗಿತ್ತು. ಯಾರೋ ಶೆಫಾಲಿಯ ಮೇಲೆ ಇಂತಹ ಪ್ರಯೋಗ ಮಾಡಿಸಿದ್ದಾರೆ ಎಂಬುದು ಅವರ ವಾದ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net